ಬೆಂಗಳೂರು: ಜ್ಞಾನದೀಪಿಕ ಶೈಕ್ಷಣಿಕ ದತ್ತಿ ಅವರು ಹೊರತಂದಿರುವ, ಗಾನಯೋಗಿ ಪಂ.ಪಂಚಾಕ್ಷರಿ ಗವಾಯಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತೆ ಡಾ. ನಾಗಮಣಿ ಶ್ರೀನಾಥ್ ವಿರಚಿತ 'ಅಂತರಾಳದ ಆಲಾಪನೆ' ಕೃತಿಯನ್ನು ಭಾನುವಾರ ಶ್ರೀಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಶಿಕ್ಷಣ ತಜ್ಞ ಡಾ.ಬಿ.ಗುರುರಾಜ್ ಕರಜಗಿ, ಬಬ್ಬೂರ್ ಕಮ್ಮೆಸೇವಾ ಸಮಿತಿಯ ಅಧ್ಯಕ್ಷ ಡಾ.ಎ.ಬಿ.ಪ್ರಸನ್ನ, ಡಾ. ಎನ್. ಸತ್ಯಪ್ರಕಾಶ್, ಎನ್.ಶಿವಮೂರ್ತಿ, ಶ್ರೀನಾಥ್ ಚಕ್ರವರ್ತಿ ಇದ್ದರು.