ಕಾಸರಗೋಡು: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 20ರ ಹರೆಯದ ಹಿಂದು ಯುವತಿ ಅನ್ಯಕೋಮಿನ ಯುವಕನ ಜತೆ ಪರಾರಿಯಾಗಿರುವ ಘಟನೆ ಬೆನ್ನಿಗೆ ಕಾಸರಗೋಡು ವಿದ್ಯಾನಗರ ಠಾಣೆ ವ್ಯಾಪ್ತಿಯಲ್ಲೂ ಇದೇ ಮಾದರಿಯ ಘಟನೆ ನಡೆದಿದೆ. ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ‘ಕಾಪಾ’ ಪ್ರಕರಣದ ಆರೋಪಿಯಾಗಿರುವ ಅನ್ಯಕೋಮಿನ ಯುವಕನ ಜತೆ 20ರ ಹರೆಯದ ಯುವತಿ ಪರಾರಿಯಾಗಿರುವ ದೂರು ದಾಖಲಾಗಿದೆ. ಇಲ್ಲಿನ ಕ್ವಾರ್ಟ್ರರ್ಸ್ ಒಂದರಲ್ಲಿ ಯುವತಿಯ ಕುಟುಂಬ ಇತ್ತೀಚೆಗೆ ವಾಸ್ತವ್ಯ ಹೂಡಿದ್ದು, ಅನ್ಯ ಕೋಮಿನ ಯುವಕನ ಜತೆ ಯುವತಿ ಸ್ನೇಹ ಬೆಳೆಸಿದ್ದಳು. ಮನೆಯವರು ಯುವತಿಗೆ ಎಚ್ಚರಿಕೆ ನೀಡುತ್ತಿದ್ದಂತೆ, ಯುವಕನ ಜತೆ ಪರಾರಿಯಾಗಿದ್ದಾಳೆ. ಇತ್ತೀಚೆಗಷ್ಟೆ ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ನೇಹಾ ಎಂಬಾಕೆ ಮಿರ್ಶಾದ್ ಎಂಬಾತನೊಂದಿಗೆ ಪರಾರಿಯಾಗಿದ್ದಳು. ಇದೊಂದು ವ್ಯವಸ್ಥಿತ ಲವ್ ಜಿಹಾದ್ ಕೇಸ್ ಆಗಿದ್ದು, ಪೊಲೀಸರ ಪರೋಕ್ಷ ಬೆಂಬಲದೊಂದಿಗೆ ನೇಹಾಳನ್ನು ಮಿರ್ಶಾದ್ ಅಪಹರಿಸಿರುವುದಾಗಿ ಆರೋಪಿಸಿ ಹಿಂದು ಸಂಘಟನೆಗಳು ಪೊಲೀಸ್ ಠಾಣೆ ಎದುರು ಧರಣಿ ನಡೆಸಿದ್ದವು.