ಭದ್ರಾವತಿ: ವಿಐಎಸ್‌ಎಲ್ ಕಾರ್ಖಾನೆ ಒಳ ಆವರಣದಲ್ಲಿ ಬುಧವಾರ ರಾತ್ರಿಯೂ ಚಿರತೆಯೊಂದು ಪ್ರತ್ಯಕ್ಷವಾಗಿದೆ. ರಾತ್ರಿ ಕಾವಲುಗಾರರು ಕಾರ್ಖಾನೆಯ ಒಳಗಡೆ ಗಸ್ತು ತಿರುಗುತ್ತಿದ್ದಾಗ ಚಿರತೆ ಜೀಪಿಗೆ ಅಡ್ಡ ಬಂದಿದೆ.
ಮಂಗಳವಾರ ರಾತ್ರಿ ಬೋನಿಗೆ ಬಿದ್ದಿದ್ದ ಚಿರತೆ ಮರಿಯನ್ನು ಬೋನಿನಲ್ಲಿ ಹಾಗೆಯೇ ಬಿಟ್ಟಿರುವುದರಿಂದ ಅದನ್ನು ಹುಡುಕಿಕೊಂಡು ಈ ಚಿರತೆ ಬಂದಿರಬಹುದು ಎನ್ನಲಾಗಿದೆ.
ಕಾರ್ಖಾನೆ ಆಡಳಿತ ಮಂಡಳಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯ ಬಗ್ಗೆ ಹೆಚ್ಚಿನ ನಿಗಾ ವಹಿಸಿದ್ದಾರೆ.