ಜಿಲ್ಲೆ

ಕನಕಪುರದಲ್ಲಿ ಆನೆ ದಾಳಿಗೆ ಮತ್ತೊಬ್ಬ ರೈತ ಬಲಿ

ರಾಮನಗರ: ಆನೆ ದಾಳಿಗೆ ಮತ್ತೊಬ್ಬ ರೈತರು ಬಲಿಯಾಗಿದ್ದು, ಕಳೆದ ಒಂದು ವಾರದಲ್ಲಿ ನಡೆದ ಎರಡನೇ ಘಟನೆ ಇದಾಗಿದೆ.

ಕನಕಪುರ ತಾಲೂಕು ಗೌಡಳ್ಳಿ ಗ್ರಾಮದ ರೈತ ರಾಜು(48) ಮೃತಪಟ್ಟವರು. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಗೆ ಒಳಪಡುವ  ಬಿಳಿಕಲ್ ಅರಣ್ಯ ಪ್ರದೇಶದಲ್ಲಿ ಗುರುವಾರ ಸಂಜೆ ಆನೆ ತುಳಿತದಿಂದ ರಾಜು ಸಾವನಪ್ಪಿದ್ದಾರೆ.

ದನಗಳನ್ನು ಮೇಯಿಸಲು ಕಾಡಿಗೆ ಹೋಗಿದ್ದಾಗ ಈ ಘಟನೆ ನಡೆದಿದೆ. ಸಂಜೆ ಆದರೂ ರಾಜು ಮನೆಗೆ ಬಾರದ ಹಿನ್ನೆಲೆಯಲ್ಲಿ  ಅನುಮಾನಗೊಂಡು ಕುಟುಂಬ ಸದಸ್ಯರು ಕಾಡಿನಲ್ಲಿ  ಹುಡುಕಿದಾಗ ಮೃತ ದೇಹ ದೊರೆತಿದೆ. ಮೃತ ರಾಜುವಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಪತ್ನಿ ಮತ್ತು ತಾಯಿ ಇದ್ದಾರೆ.

ಶುಕ್ರವಾರ ಬೆಳಗ್ಗೆ ಅರಣ್ಯ ಅಧಿಕಾರಿಗಳು, ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಕನಕಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.