ಕಲ್ಮಕಾರ್‌ನಲ್ಲಿ ಆನೆ ದಾಳಿಗೆ ತುತ್ತಾದ ತೋಟ. 
ಜಿಲ್ಲೆ

ಆನೆ ದಾಳಿ ಮತ್ತೊಬ್ಬ ರೈತ ಸಾವು

ಗಂಗಾಧರ ಬಿ ವಿ

ಕನಕಪುರ: ಕಾಡಾನೆ ದಾಳಿಯಿಂದ ರೈತನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗಟ್ಟಿಗುಂದ ಗ್ರಾಮದ ಸುರೇಶ್(45) ಮೃತ.

ತೋಟದ ಮನೆಯಲ್ಲಿ ರೇಷ್ಮೆ ಹುಳುವಿಗೆ ಸೊಪ್ಪು ಹಾಕಿ ಬುಧವಾರ ರಾತ್ರಿ 8 ಗಂಟೆಯಲ್ಲಿ ಮನೆಗೆ ಹಿಂದಿರುಗುವಾಗ ಎದುರಿನಿಂದ ಬಂದ ಕಾಡಾನೆ ದಾಳಿ ಮಾಡಿದೆ. ತಪ್ಪಿಸಿಕೊಳ್ಳಲು ಯತ್ನಿಸಿದರೂ ಜಮೀನಿನಲ್ಲಿ ಅಟ್ಟಾಡಿಸಿ ಸಾಯಿಸಿದೆ.

ಬನ್ನೇರುಘಟ್ಟ ವನ್ಯಜೀವಿ ವಿಭಾಗದ ಮಂಜುನಾಥ ಅರಣ್ಯ ಪ್ರದೇಶದಿಂದ ಬಂದ ಕಾಡಾನೆ ದಾಳಿ ನಡೆಸಿದೆ ಎನ್ನಲಾಗಿದೆ.

ಕಳೆದ ವಾರ ತಿಪ್ಪೂರು ಗ್ರಾಮದಲ್ಲಿ ಕಾಡಾನೆ ದಾಳಿಗೆ ರೈತನೊಬ್ಬನ ಸಾವು ಮಾಸುವ ಮುನ್ನವೇ ಮತ್ತೊಬ್ಬನ ಸಾವು ಆತಂಕಕ್ಕೆ ಈಡು ಮಾಡಿದೆ.