ಜಿಲ್ಲೆ

ಭಕ್ತಿಯ ಮತ್ತೊಂದು ಮುಖ ಮೋಕ್ಷ

ಹುಬ್ಬಳ್ಳಿ: ನಿಷ್ಕಾಮ ಭಕ್ತಿಯಿಂದ ಮಾತ್ರ ಭಗವಂತನನ್ನು ಕಾಣಲು ಸಾಧ್ಯ. ನಾವು ಯಾವ ರೀತಿ ಭಕ್ತಿ ಮಾಡಬೇಕು? ಯಾವುದು ನಿಜವಾದ ಭಕ್ತಿ,?ಭಕ್ತನಲ್ಲಿ ಇರಬೇಕಾದ ಗುಣಗಳು ಯಾವವು? ಯಾರ ಉಪಾಸನೆಯಿಂದ ಭಗವಂತನನ್ನು ಹೊಂದುತ್ತಾರೆ? ಮೋಕ್ಷ ಪಡೆಯುತ್ತಾರೆ ? ಎಂಬ ಪ್ರಶ್ನೆಗಳು ನಮ್ಮಲ್ಲಿ ಮೂಡುತ್ತದೆ. ಈ ಪ್ರಶ್ನೆಗಳಿಗೆ ಶ್ರೀಕೃಷ್ಣ ಪರಮಾತ್ಮನ ಉಪಾಸನೆಯಿಂದ ಮಾತ್ರ ಮೋಕ್ಷ ಹೊಂದುತ್ತಾರೆ ಎಂದು ಪಂ. ಕಪಿಲಾಚಾರ್ಯ ಗಲಗಲಿ ತಿಳಿಸಿದರು.
ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ಸಮೀಪದ ವನಸಿರಿ ನಗರದಲ್ಲಿರುವ ಡಾ. ಶ್ರೀನಾಥ ಅವರ ನಿವಾಸದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ 12ನೇ ಅಧ್ಯಾಯವಾದ ಭಕ್ತಿ ಯೋಗ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅವ್ಯಕ್ತ ತತ್ವ, ಮಾತೆ ಲಕ್ಷ್ಮೀಯ ಉಪಾಸನೆ ಹಾಗೂ ಭಗವಂತನ ಉಪಾಸನೆಯಲ್ಲಿ ವ್ಯತಿರಿಕ್ತ. ಉಪಾಸನೆಯಲ್ಲಿ ಏನಾದರೂ ಲೋಪ ದೋಷಗಳಾದರೆ ಮಾತೆ ಲಕ್ಷ್ಮೀ ಕ್ಷಮಿಸಲಾರಳು. ಆದರೆ ಭಗವಂತ ಕ್ಷಮಿಸುತ್ತಾನೆ ಎಂದರು.
ಕಾರ್ಯಕ್ರಮ ಪೂರ್ವದಲ್ಲಿ ನಾರಾಯಣಿ ಭಜನಾ ಮಂಡಳಿಯಿಂದ ಭಜನೆ, ಬಳಗದ ಸದಸ್ಯರಿಂದ ಹರಿವಾಯು ಗುರುಗಳ ಪಾರಾಯಣದಿಗಳು ನಡೆದವು. ಕಾರ್ಯಕ್ರಮದಲ್ಲಿ ರಘೋತ್ತಮ ಅವಧಾನಿ, ಕೃಷ್ಣ ಹುನಗುಂದ, ಡಿ.ಕೆ. ಜೋಶಿ, ಹನುಮಂತ ಪುರಾಣಿಕ, ಸಿ.ಕೆ. ಕುಲಕರ್ಣ, ಪ್ರೊ. ವಾಮನ ಭಾದ್ರಿ, ಸಂಜೀವ ಜೋಶಿ, ಕೇಶವ ಕುಲಕರ್ಣಿ, ವಿಲಾಸ ಸಬನಿಸ, ಆನಂದ ಬಾಗಲ, ರಮೇಶ ಅಣ್ಣಿಗೇರಿ, ಸಂಜೀವ ಜೋಶಿ, ಉದಯ ದೇಶಪಾಂಡೆ, ಅಶೋಕ ಬಹದ್ದೂರ ದೇಸಾಯಿ, ಅನಿಲ್ ದೇಶಪಾಂಡೆ, ಪ್ರಕಾಶ ದೇಸಾಯಿ, ಗಿರೀಶ ಪಾಟೀಲ, ಆನಂದ ದೇಶಪಾಂಡೆ ಇತರರು ಇದ್ದರು.