ಕಾಸರಗೋಡು: ಕುಂಬಳೆ ರೈಲ್ವೆ ನಿಲ್ದಾಣ ಸನಿಹ ಸಾರ್ವಜನಿಕ ಸ್ಥಳದಲ್ಲಿ ವಿದ್ಯಾರ್ಥಿನಿಗೆ ಕಿರುಕುಳ ನೀಡಲು ಯತ್ನಿಸಿದ ಆರೋಪಿ, ಕುಂಬಳೆ ಆರಿಕ್ಕಾಡಿಯ ಕಡವತ್ ನಿವಾಸಿ ಶುಹೈಬ್(26) ಎಂಬಾತನ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಮಂಜೇಶ್ವರ ಕಾಲೇಜೊಂದರ ವಿದ್ಯಾರ್ಥಿನಿ ದೂರು ನೀಡಿದ್ದಾಳೆ. ಜೂನ್ 5ರಂದು ಕುಂಬಳೆ ರೈಲ್ವೆ ನಿಲ್ದಾಣ ಸನಿಹದ ರಸ್ತೆಯಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಕುಂಬಳೆ ಠಾಣಾ ಪೊಲೀಸರು ಆತನನ್ನು ಬಂಧಿಸಿದ್ದರು. ಆರೋಪಿಯ ಕಿಡಿಗೇಡಿ ಕೃತ್ಯ ರೈಲ್ವೆ ನಿಲ್ದಾಣ ಸನಿಹದ ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಚಾರಣೆ ವೇಳೆ ಮತ್ತೊಂದು ಪ್ರಕರಣ ದಾಖಲಾಗಿದೆ.