ಎನ್.ಆರ್.ಪುರದಲ್ಲಿ ವರ್ಷಧಾರೆಯಾಯಿತು. 
ಜಿಲ್ಲೆ

ಶ್ರೀ ಮಾರಿಕಾಂಬೆ ಕೃಪೆಗೆ ವರ್ಷಧಾರೆ

ಎನ್.ಆರ್.ಪುರ: ತಾಲೂಕಿನಲ್ಲಿ ಶನಿವಾರ ಸಂಜೆ ವರ್ಷಧಾರೆಯಾಯಿತು.

ಮಳೆಯಾಗಲಿ ಎಂದು ಪ್ರಾರ್ಥಿಸಿ ಪಟ್ಟಣದ ಮಾರಿಕಾಂಬಾ ದೇವಿಗೆ ಶುಕ್ರವಾರ ಮಾರಿಕಾಂಬಾ ಜಾತ್ರಾ ಸಮಿತಿ ಅಧ್ಯಕ್ಷ ಪಿ.ಆರ್.ಸದಾಶಿವ, ಮುಖಂಡ ಎಚ್.ಎನ್.ರವಿಶಂಕರ್ ಇತರರು ವಿಶೇಷ ಪೂಜೆ ಸಲ್ಲಿಸಿದ್ದರು. ಸಂಜೆಯಾಗುತ್ತಲೇ ಮಳೆಯಾಯಿತು. ಶನಿವಾರ ಸಂಜೆಯೂ ಧಾರಾಕಾರ ಮಳೆಯಾಯಿತು. ಶ್ರೀ ಮಾರಿಕಾಂಬೆ ಕೃಪೆಯಿಂದ ಮಳೆಯಾಗಿದೆ ಎಂದು ಸುಗ್ಗಪ್ಪನಮಠ ಮಂಜು ಹರ್ಷ ವ್ಯಕ್ತಪಡಿಸಿದರು.
ಆಲ್ದೂರು ಹಾಗೂ ಸುತ್ತಮುತ್ತ ಶನಿವಾರ ಮಧ್ಯಾಹ್ನ ಸಾಧಾರಣ ಮಳೆಯಾಯಿತು. ಶುಕ್ರವಾರ ಮಧ್ಯಾಹ್ನ ಮಳೆ ವಾತಾವರಣವಿದ್ದರೂ ಮಳೆಯಾಗಿರಲಿಲ್ಲ. ಶನಿವಾರ ಮಧ್ಯಾಹ್ನ ಸಾಧಾರಣ ಮಳೆಯಾಗಿದೆ. ಕಾಫಿ ಹೂ ಅರಳಲು ಇನ್ನೂ ಹೆಚ್ಚಿನ ಮಳೆಯ ಅವಶ್ಯಕತೆ ಇದೆ.