ಜಿಲ್ಲೆ

ಭೂತೇಶ್ವರನಿಗೆ ವಾರ್ಷಿಕ ಪೂಜೆ

ಬಸವರಾಜ ವೀರಪ್ಪ ಗರಗ

ಸಿದ್ದಾಪುರ: ತಾಲೂಕಿನ ಹಲಸಗಾರಿನ ಜಲನಾಗದೇವತೆ ಹಾಗೂ ಭೂತೇಶ್ವರ ದೇವಸ್ಥಾನದ ಏಳನೇ ವರ್ಷದ ವಾರ್ಷಿಕ ಪೂಜೆ ನಡೆಯಿತು.

ಪೂಜೆಯ ಪೂಜೆಯ ಪ್ರಯುಕ್ತ ಸ್ಥಳ ಶುದ್ಧಿ, ಸುಬ್ರಹ್ಮಣ್ಯ ಶಾಂತಿಪೂರ್ವಕ ಜಲನಾಗ ದೇವಿಯ ಕಲಾವೃದ್ಧಿ ಶುದ್ಧ ಹೋಮ ಹಾಗೂ ಮಂಡಲ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.

ರಾತ್ರಿ ಮಾರುತಿ ಪ್ರಸಾದಿತ ಯಕ್ಷಗಾನ ಮಂಡಳಿ ಬೇಡ್ಕಣಿ ಅವರಿಂದ ‘ಮಹಿಷಾಸುರ ಮರ್ಧಿನಿ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡು ಜನಮನ ಮೆಚ್ಚಿಸಿತು.