ಜಿಲ್ಲೆ

ಗುಳಿಗ, ದೈವ ವಾರ್ಷಿಕ ಪೂಜೆ

ಶನಿವಾರಸಂತೆ: ಪಟ್ಟಣದ ತ್ಯಾಗರಾಜ ಕಾಲನಿಯಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವರ ಗುಡಿಯಲ್ಲಿ ಗುಳಿಗ ಮತ್ತು ದೈವದ ವಾರ್ಷಿಕ ಪೂಜೆಯ ಅಂಗವಾಗಿ ವಿಶೇಷ ಪೂಜಾ ಕಾರ್ಯ ಭಾನುವಾರ ನೆರವೇರಿತು.

ಗಣಹೋಮ, ದುರ್ಗಾಹೋಮ, ಕುಂಬ ಕಳಸ ಪೂಜೆ ನೆರವೇರಿಸಲಾಯಿತು. ಅರ್ಚಕ ಜಗದೀಶ್ ಉಡುಪ, ಹರಿಭಟ್, ಮಯೂರ ಭಟ್, ಪ್ರಕಾಶ್‌ಚಂದ್ರ, ಸಂತೋಷ್ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನೆರವೇರಿದವು.

ದೇವಾಲಯ ಪ್ರಮುಖರಾದ ನಯನತಾರ, ಯಶಸ್ವಿನಿ ರಾಜೇಶ್, ರಾಜೇಶ್‌ಕೊಟ್ಯಾನ್, ಸಂತೋಷ್, ಧಾಮೋಧರ್, ಜಯಂ ತಿಮಾಲ, ಶಾಂತಾ ಇತರರು ಇದ್ದರು.