ಜಿಲ್ಲೆ

ದೊಡ್ಡಬ್ಯಾಡರಹಳ್ಳಿಯಲ್ಲಿ ತರಬೇತಿ ಕಾರ್ಯಾಗಾರ: ನ.15 ಮತ್ತು 16ರಂದು ನಿಷೇಧಾಜ್ಞೆ ಜಾರಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಪಾಂಡವಪುರ ತಾಲೂಕು ದೊಡ್ಡಬ್ಯಾಡರಹಳ್ಳಿಯ ಪೊಲೀಸ್ ಫೈರಿಂಗ್ ರೇಂಜ್‌ನಲ್ಲಿ ನ.15 ಮತ್ತು 16ರಂದು ರೈಲ್ವೆ ರಕ್ಷಣಾದಳ ಮೈಸೂರು ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿಗೆ ಎರಡನೆ ಹಂತದ ಮದ್ದು-ಗುಂಡುಗಳ ವಾರ್ಷಿಕ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಿಗದಿತ ದಿನದಂದು ಫೈರಿಂಗ್ ರೇಂಜ್‌ನಲ್ಲಿ ಬೆಳಗ್ಗೆ 5ಗಂಟೆಯಿಂದ ಜನರು ಹಾಗೂ ಸಾಕುಪ್ರಾಣಿಗಳ ಸಂಚಾರ ನಿಷೇಧಿಸಲಾಗಿದೆ ಎಂದು ರೈಲ್ವೆ ಇಲಾಖೆಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.