ಜಿಲ್ಲೆ

ಎನ್ನೆಸ್ಸೆಸ್‌ನಿಂದ ಸೇವೆಯ ಪಾಠ : ಅರವಿಂದ ಅಯ್ಯಪ್ಪ ಸುತಗುಂಡಿ ಅಭಿಮತ

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ

ಸೇವಾ ಕೈಂಕರ್ಯವೆಂಬ ಶ್ರೇಷ್ಠ ಮನೋಭಾವನೆ ಯುವ ಜನಾಂಗದಲ್ಲಿ ಮೂಡಲು ಎನ್ನೆಸ್ಸೆಸ್ ರಹದಾರಿ. ವಿದ್ಯಾರ್ಥಿಗಳ ಭವಿಷ್ಯದ ಕನಸುಗಳನ್ನು ಈಡೇರಿಸುವ ಶಕ್ತಿ ರಾಷ್ಟ್ರೀಯ ಸೇವಾ ಯೋಜನೆಯಾಗಿದೆ. ಸೇವೆಯು ಬದುಕಿನ ಅವಿಭಾಜ್ಯ ಅಂಗ ಎಂಬ ಪಾಠವನ್ನು ಯುವ ಜನಾಂಗಕ್ಕೆ ಬೋಧಿಸುವ ಕಾರ್ಯವನ್ನು ಎನ್ನೆಸ್ಸೆಸ್ ಮಾಡುತ್ತಿದೆ ಎಂದು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಮತ್ತು ಎಸ್‌ಎಸ್‌ಪಿಯು ಕಾಲೇಜಿನ ಕಾರ್ಯದರ್ಶಿ ಅರವಿಂದ ಅಯ್ಯಪ್ಪ ಸುತಗುಂಡಿ ಹೇಳಿದರು.

ಎಲಿಮಲೆ ಸರ್ಕಾರಿ ಪ್ರೌಢಶಾಲೆಯಲ್ಲಿ ಒಂದು ವಾರ ನಡೆಯುವ ಸುಬ್ರಹ್ಮಣ್ಯದ ಎಸ್‌ಎಸ್‌ಪಿಯು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಎಲಿಮಲೆ ಪ್ರೌಢಶಾಲಾ ಮುಖ್ಯಶಿಕ್ಷಕ ಸಂಧ್ಯಾ ಕುಮಾರ್, ಕೃಷಿಕೆ ತುಳಸಿ ತೀರ್ಥರಾಮ ಅಂಬೆಕಲ್ಲು, ಎಸ್‌ಡಿಎಂಸಿ ಅಧ್ಯಕ್ಷ ಧನಂಜಯ ಬಾಳೆತೋಟ ಮುಖ್ಯಅತಿಥಿಗಳಾಗಿದ್ದರು. ಎನ್ನೆಸ್ಸೆಸ್ ಯೋಜನಾಧಿಕಾರಿಗಳಾದ ಪೂರ್ಣಿಮಾ, ಸೌಮ್ಯಾ ಎ., ನಾಯಕರುಗಳಾದ ಭ್ರಮರ್, ಮೌಲ್ಯ ಎಸ್.ಉಪಸ್ಥಿತರಿದ್ದರು.