ವಿರಾಜಪೇಟೆ: ಬಿಟ್ಟಂಗಾಲ ಗ್ರಾಮದ ಕಂಪನಿಮೊಟ್ಟೆ ಶ್ರೀ ಪ್ರಾರ್ಥನಾ ಮಡಪುರ ಶ್ರೀ ಮುತ್ತಪ್ಪ ದೇವಾಲಯದ 33ನೇ ವಾರ್ಷಿಕ ತೆರೆ ಮಹೋತ್ಸವ ಇತ್ತೀಚೆಗೆ ಸಾಂಪ್ರದಾಯಿಕವಾಗಿ ಸಂಪನ್ನಗೊಂಡಿತು.
ಮಂಗಳವಾರ ಗಣಪತಿ ಹೋಮದೊಂದಿಗೆ ಆರಂಭವಾದ ಉತ್ಸವ ಧ್ವಜಾರೋಹಣ, ಕಣ್ಣಂಬಾಡಿ ಅಮ್ಮ ಅವರ ಪೂಜೆ, ಇತ್ಯಾದಿ ಕೈಂಕರ್ಯಗಳು ಜರುಗಿದವು. ಮುತ್ತಪ್ಪನ್ ವೆಳ್ಳಾಟಂ ಗುಳಿಗನ ತೋಟ್ಟಂ ತೆರೆ, ಬಸಸುರಿಮಾಲ ದೇವರ ತೊಟ್ಟಂ ತೆರೆ ಭಕ್ತರ ಮೈ ಪುಳಕಿತಗೊಳಿಸಿತು.
ಬುಧವಾರ ಬೆಳಗ್ಗೆ ಗುಳಿಗನ್ ತೆರೆ, ಮುತ್ತಪ್ಪನ್ ಮತ್ತು ತಿರುವಪ್ಪನ್ ವೆಳ್ಳಾಟಂ, ಬಸುರಿಮಾಲ ತೆರೆಯೊಂದಿಗೆ ವಾರ್ಷಿಕ ತೆರೆ ಮಹೋತ್ಸವ ಸಂಪನ್ನವಾಯಿತು. ದೇವಾಲಯದ ವತಿಯಿಂದ ಭಕ್ತರಿಗೆ ಅನ್ನಸಂರ್ಪಣೆ ಏರ್ಪಡಿಸಲಾಗಿತ್ತು.