ಹೆಬ್ರಿ: ಬಡಾಗುಡ್ಡೆಯ ಕೊರತಿ ಕೊರಗಜ್ಜ ದೈವಸ್ಥಾನದ 23ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವ ಇತ್ತೀಚೆಗೆ ಜರುಗಿತು. ಗುರು ಗಣೇಶ ಪ್ರಾರ್ಥನೆ, ಕಲಶ ಶುದ್ಧ ಮಹಾಮಂಗಳಾರತಿ, ಮಂತ್ರ ಪುಷ್ಪ, ತೀರ್ಥ ಪ್ರಸಾದ ವಿತರಣೆ, ಭಜನಾ ಕಾರ್ಯಕ್ರಮ, ಮಹಾಪೂಜೆ, ಅನ್ನ ಸಂತರ್ಪಣೆ, ದರ್ಶನ ಸೇವೆ ಜರುಗಿತು.
ಆಡಳಿತ ಮಂಡಳಿ ಅಧ್ಯಕ್ಷ ಜನಾರ್ದನ್ ಬಡಾಗುಡ್ಡೆ ನೇತೃತ್ವದಲ್ಲಿ ಪೂಜಾ ಮಹೋತ್ಸವ ನೆರವೇರಿತು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ್ ನಾಯಕ್, ಗೌರವಾಧ್ಯಕ್ಷ ನಾಗರಾಜ್ ಜೋಯಿಸ್, ಪ್ರಧಾನ ಕಾರ್ಯದರ್ಶಿ ಎಚ್.ಜನಾರ್ದನ್ ಶೇರಿಗಾರ್ ಮತ್ತಿತರರಿದ್ದರು.