ಜಿಲ್ಲೆ

ಮಕ್ಕಳೊಂದಿಗೆ ಆಪ್ತ-ಮುಕ್ತವಾಗಿ ಮಾತನಾಡಿ...

ಪಾಲಕರಿಗೆ ಡಾ. ನಾಗರಾಜ ಮೂರ್ತಿ ಸಲಹೆ

ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಸಭೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಇಂದಿನ ಯುವ ವಿದ್ಯಾರ್ಥಿಗಳು ಸ್ವತಂತ್ರವಾದ ತೀಮಾರ್ನ ತೆಗೆದುಕೊಳ್ಳುವಲ್ಲಿಯೂ ಸಹ ಸಮಸ್ಯೆ ಅನುಭವಿಸುತ್ತಾರೆ. ಹೀಗಾಗಿ ಪಾಲಕರು ಅತ್ಯಂತ ಆಪ್ತವಾಗಿ ಮತ್ತು ಮುಕ್ತವಾಗಿ ಮನತೆರೆದು ಮಕ್ಕಳೊಂದಿಗೆ ಮಾತನಾಡಬೇಕು. ತನ್ಮೂಲಕ ಅವರಿಗೆ ಅತ್ಯುತ್ತಮವಾದ ಸಾಮಾಜಿಕ ಆವರಣ ನಿರ್ಮಿಸಿಕೊಟ್ಟು ಅವರ ಶೈಕ್ಷಣಿಕ ಬದುಕಿಗೆ ಭದ್ರ ಬುನಾದಿ ಹಾಕಿಕೊಡಬೇಕೆಂದು ಎ.ವಿ. ಬಾಳಿಗಾ ಮೆಮೋರಿಯಲ್​ ಆಸ್ಪತ್ರೆಯ ಹಿರಿಯ ಮನ:ಶಾಸ್ತ್ರಜ್ಞ ಡಾ. ನಾಗರಾಜ ಮೂರ್ತಿ ಸಲಹೆ ನೀಡಿದರು.

ಉಡುಪಿ ಹಿರಿಯಡ್ಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿದರು.

ಯುವ ಸಮಾಲೋಚಕಿ ಭೀಮವ್ವ ವಕ್ರ ಮಾತನಾಡಿ, ಉಡುಪಿ ಯುವಸ್ಪಂದನ ಸಂಸ್ಥೆಯ ಮೂಲಕ ವಿದ್ಯಾರ್ಥಿಗಳಿಗೆ ಸಿಗುವ ಸಮಾಲೋಚನಾ ಸೌಲಭ್ಯದ ಸ್ವರೂಪ ತಿಳಿಸಿದರು. ಪ್ರಾಂಶುಪಾಲ ಡಾ. ಜಯಪ್ರಕಾಶ ಶೆಟ್ಟಿ ಎಚ್​. ಅಧ್ಯಕ್ಷತೆ ವಹಿಸಿದ್ದರು. ಐಕ್ಯುಎಸಿ ಸಂಚಾಲಕ ಡಾ. ಲಿತಿನ್​ ಬಿ.ಎಂ. ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷರ ಆಯ್ಕೆ

2025-26ನೇ ಸಾಲಿನ ಶಿಕ್ಷಕ-ರಕ್ಷಕ ಸಂಘದ ಅಧ್ಯೆಯಾಗಿ ಶಾಂತಾ ಪೆರ್ಡೂರು ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ ಪ್ರಕಾಶ ಶೆಟ್ಟಿಗಾರ್​ ಶಿವಪುರ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಗಾಯತ್ರಿ, ಶ್ರೀಮತಿ ಆಚಾರ್ಯ, ವಿಠ್ಠಲ ನಾಯ್ಕ, ಭಾಸ್ಕರ ಆಚಾರ್ಯ, ಗೋಪಾಲ ಹಾಗೂ ಸುರೇಖಾ ಬಂಗೇರ ಸರ್ವಾನುಮತದಿಂದ ಆಯ್ಕೆಗೊಂಡರು.

ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಸಂಚಾಲಕಿ ಡಾ. ಸೌಮ್ಯಲತಾ ಪಿ. ಸ್ವಾಗತಿಸಿದರು. ಶಿಕ್ಷಕ-ರಕ್ಷಕ ಸಂಘದ ಸಂಚಾಲಕಿ ಮೀನಾಕ್ಷಿ ನಾಯ್ಕ ವಂದಿಸಿದರು. ಕನ್ನಡ ಉಪನ್ಯಾಸಕ ರವಿಚಂದ್ರ ಬಾಯರಿ ಕೆ. ನಿರೂಪಿಸಿದರು.

ಪ್ರಸ್ತುತ ವರ್ತಮಾನದ ವಾಸ್ತವಗಳ ಕುರಿತು ಹೆತ್ತವರು ಗಮನಹರಿಸಬೇಕಿದೆ. ಯುವ ಮನಸ್ಸುಗಳಿಗೆ ಬದುಕಿನಲ್ಲಿ ಎದುರಾಗುವ ಸವಾಲು ಎದುರಿಸಲು ಅಗತ್ಯವಾದ ವ್ಯಾವಹಾರಿಕ ಜ್ಞಾನ, ಎಚ್ಚರ ಮೂಡಿಸಬೇಕಾದ ಅಗತ್ಯತೆ ಹಿಂದೆಂದಿಗಿಂತಲೂ ಈಗ ಬಹಳ ಅಗತ್ಯವಿದೆ. | ಡಾ. ನಾಗರಾಜ ಮೂರ್ತಿ. ಹಿರಿಯ ಮನ:ಶಾಸ್ತ್ರಜ್ಞ