ಜಿಲ್ಲೆ

ಸೈನಿಕರ ಸೌಹಾರ್ಧ ಸಹಕಾರ ಸಂಘದ ವಾರ್ಷಿಕ ಸಭೆ

ಹಾಸನ: ಜಿಲ್ಲಾ ಸೈನಿಕರ ಸೌಹಾರ್ಧ ಸಹಕಾರ ಸಂಘದ ವಾರ್ಷಿಕ ಸಭೆ ಶನಿವಾರ ಕುವೆಂಪು ನಗರದಲ್ಲಿರುವ ಸೈನಿಕರ ಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಜೆ.ಎನ್.ನಾಗರಾಜು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಲ್ಲ ಸದಸ್ಯರು ಸಹಕಾರ ನೀಡಿದರೆ ಸಂಘವನ್ನು ಹಾಸನದಲ್ಲಿ ಉತ್ತಮ ಸಂಘವಾಗಿ ರೂಪಿಸಲು ಸಹಕಾರಿಯಾಗಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಶೇರು ಖರೀದಿಸುವ ಮೂಲಕ ಸಂಘದ ಬೆಳವಣಿಗೆಗೆ ಸಹಕರಿಸುವಂತೆ ಕರೆ ನೀಡಿದರು.

ಸಂಘದ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿ ಯು.ಎ.ಗಂಗಾಧರ್, ಉಪಾಧ್ಯಕ್ಷ ಎ.ಎಸ್.ಪ್ರದೀಪ್ ಸಾಗರ್, ಮಾಜಿ ಅಧ್ಯಕ್ಷ ಬೆಟ್ಟೇಗೌಡ, ಕುಶಾಲ್ ರಾಜು, ಸಂಘದ ನಿರ್ದೇಶಕರು ಇತರರು ಇದ್ದರು.