ಸಾಂತೂರು ಶ್ರೀವಿಶ್ವಕರ್ಮ ಸೇವಾ, ಸಂಘದಲ್ಲಿ ವಿಶ್ವಕರ್ಮ ಪೂಜೆ ಹಾಗೂ ವಾರ್ಷಿಕ ಸಭೆಯನ್ನು ಸಂಘದ ಅಧ್ಯಕ್ಷ ರಾಜೇಶ್ ಆಚಾರ್ಯ ಉದ್ಘಾಟಿಸಿದರು 
ಜಿಲ್ಲೆ

ವಿಶ್ವಕರ್ಮ ಪೂಜೆ, ವಾರ್ಷಿಕ ಸಭೆ

ಇಂದಿರಾ ಎನ್ ಕೆ

ಕಾರ್ಕಳ: ಸಾಂತೂರು ಶ್ರೀ ವಿಶ್ವಕರ್ಮ ಸೇವಾ ಸಂಘದಲ್ಲಿ ವಿಶ್ವಕರ್ಮ ಪೂಜೆ ಹಾಗೂ ವಾರ್ಷಿಕ ಸಭೆ ಇತ್ತಿಚೇಗೆ ನಡೆಯಿತು.
ಸಂಘದ ಅಧ್ಯಕ್ಷ ರಾಜೇಶ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಪೂರ್ಣಪ್ರಜ್ಞಾ ಕಾಲೇಜು ಉಪನ್ಯಾಸಕ ಮುರಳಿ ಆಚಾರ್ಯ ಪಣಿಯೂರು, ಶಿಕ್ಷಕಿ ಗೀತಾಚಂದ್ರ ಆಚಾರ್ಯ ಶುಭಹಾರೈಸಿದರು.

ಗೌರವಾಧ್ಯಕ್ಷ ಮಧು ವಿಠಲ ಆಚಾರ್ಯ, ಗ್ರಾಮ ಮೊಕ್ತೇಸರ ರಮೇಶ ಆಚಾರ್ಯ, ವಿಶ್ವಕಲಾ ಮಹಿಳಾ ಮಂಡಳಿ ಅಧ್ಯಕ್ಷೆ ವಸಂತಿ ಮೋಹನ್ ಆಚಾರ್ಯ ಉಪಸ್ಥಿತರಿದ್ದರು. ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಂಘದ ಅಧ್ಯಕ್ಷ ರಾಜೇಶ್ ಆಚಾರ್ಯ ದಂಪತಿಗಳನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ಶ್ರೀಕಾಂತ್ ಆಚಾರ್ಯ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಜತೆ ಕಾರ್ಯದರ್ಶಿ ವರದಿ ವಾಚಿಸಿದರು. ಪ್ರಿಯಾಂಕಾ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ವಿಶ್ವನಾಥ ಆಚಾರ್ಯ ಸ್ವಾಗತಿಸಿದರು. ಅಭಿಷೇಕ್ ಆಚಾರ್ಯ ವಂದಿಸಿದರು. ಅನಿತಾ ಸುಧೀರ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.