ಜಿಲ್ಲೆ

ಬ್ಯಾಂಕರ್ಸ್ ಕ್ಲಬ್​ನ ವಾರ್ಷಿಕ ಸರ್ವ ಸಾಧಾರಣ ಸಭೆ

ಹುಬ್ಬಳ್ಳಿ : ಇಲ್ಲಿನ ಬ್ಯಾಂಕರ್ಸ್ ಕ್ಲಬ್​ನ 25ನೇ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ಬ್ಯಾಂಕರ್ಸ್ ಭವನದಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.

ಅತಿಥಿಯಾಗಿದ್ದ ಕೆನರಾ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಎಂ. ವಿಜಯಕುಮಾರ ಹಾಗೂ ಅಧ್ಯಕ್ಷತೆ ವಹಿಸಿದ್ದ ಕ್ಲಬ್ ಅಧ್ಯಕ್ಷ ಡಾ. ಡಿ.ಜಿ. ಶೆಟ್ಟಿ ಮಾತನಾಡಿದರು. ಕ್ಲಬ್​ನ ಹಿರಿಯ ಸದಸ್ಯರಾದ ಡಾ. ಡಿ.ಜಿ. ಶೆಟ್ಟಿ, ಸುರೇಶ ಹಾರ್ದಿಕರ, ಕೆ.ಬಿ. ಬಳ್ಳೂರ, ಚನ್ನಪ್ಪ ಜಳಕಿ, ಆರ್.ಯು. ಸುಣಗಾರ ಮತ್ತು ಎಂ.ವಿ. ಹಂದೆಪ್ಪನವರ ಅವರನ್ನು ಸನ್ಮಾನಿಸಲಾಯಿತು.

ಕ್ಲಬ್​ನ ಗೌರವ ಕಾರ್ಯದರ್ಶಿ ರಮೇಶ ಪರ್ವತಿಕರ, ವಸಂತ ಭಸ್ಮೆ, ಸುಭಾಷ ಸುಂಕದ, ವಿಶಾಲ ಪರ್ವತಿಕರ, ಗಂಗಾಧರ ಕಾಟೆನಹಳ್ಳಿ, ಕಲ್ಪನಾ ಕವಳೇಕರ ಹಾಗೂ ಇತರರು ಇದ್ದರು. ಬಸವರಾಜ ಗುರ್ಕಿ ನಿರೂಪಿಸಿದರು. ಪ್ರದೀಪ ಯಾವಗಲ್ಲ ವಂದಿಸಿದರು.