ಕೊಡಗು ಜಿಲ್ಲಾ ಕಿವುಡರ ಸಂಘದ ವಾರ್ಷಿಕ ಮಹಾಸಭೆಯು ಅಂಬೇಡ್ಕರ್ ಭವನದಲ್ಲಿ ನಡೆಯಿತು. ಜೋಸೆಫ್ ಸ್ಯಾಮ್, ಈಶ್ವರ್ ಭಟ್, ವಿ.ಕುಮಾರ್, ರಾಜೇಶ್, ಚಂದನ್, ಬಾನು ಇದ್ದರು. 
ಜಿಲ್ಲೆ

ಕಿವುಡರ ಸಂಘದ ವಾರ್ಷಿಕ ಮಹಾಸಭೆ

ವಿರಾಜಪೇಟೆ: ಕೊಡಗು ಜಿಲ್ಲಾ ಕಿವುಡರ ಸಂಘದ ವಾರ್ಷಿಕ ಮಹಾಸಭೆಯನ್ನು ವಿರಾಜಪೇಟೆಯ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸೋಮವಾರ ಆಯೋಜಿಸಲಾಗಿತ್ತು.

ಸಭೆಯ ಆರಂಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ರಂಜಿತ್ ಪುದಿಯತಂಡ ವಾರ್ಷಿಕ ವರದಿ ಮಂಡಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಜಿಲ್ಲಾ ಕಿವುಡರ ಸಂಘದ ಅಧ್ಯಕ್ಷೆ ಗೌರು ಸೋಮಣ್ಣ, ಕೊಡಗು ಕಿವುಡರ ಸಂಘವು ಏಳು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ ಎಂದು ಹೇಳಲು ಹೆಮ್ಮೆಯಾಗುತ್ತದೆ. ಮುಂದೆಯೂ ಸಂಘದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಈ ಮಹಾಸಭೆಯಲ್ಲಿ ಕಳೆದ ಭಾರಿಗಿಂತಲೂ 40ಕ್ಕೂ ಹೆಚ್ಚು ಸದಸ್ಯರು ನೆರೆದಿರುವುದನ್ನು ನೋಡಲು ಸಂತಸವಾಗುತ್ತದೆ. ಭವಿಷ್ಯದಲ್ಲಿ ಹೆಚ್ಚಿನ ಸದಸ್ಯರನ್ನು ಒಂದೇ ವೇದಿಕೆಯಲ್ಲಿ ಸೇರುವಂತೆ ಮಾಡಬೇಕು. ಕೊಡಗಿನಲ್ಲಿ ಕಿವುಡರ ಶಾಲೆ ತೆರೆಯಲು ಪ್ರಯತ್ನ ಮಾಡಬೇಕಾಗಿದೆ. ಮಾತ್ರವಲ್ಲದೆ ವಿರಾಜಪೇಟೆಯಲ್ಲಿ ಒಂದು ಕಚೇರಿಯ ಅವಶ್ಯಕತೆ ಇದ್ದು ಪುರಸಭೆಗೆ ಈ ಕುರಿತು ಮನವಿ ಸಲ್ಲಿಸಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಅಧ್ಯಕ್ಷ ಜೋಸೆಫ್ ಸ್ಯಾಮ್, ಚಾರ್ಟೆಡ್ ಅಕೌಂಟೆಂಟ್ ಈಶ್ವರ್ ಭಟ್, ಸಂಘದ ಕ್ರೀಡಾ ಪರಿಷತ್ ಅಧ್ಯಕ್ಷರಾದ ವಿ.ಕುಮಾರ್, ರಾಜೇಶ್, ಚಂದನ್ ಇದ್ದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.