ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಲೂಕಿನ ಮನಗುಂಡಿ ಗ್ರಾಮದ ಶ್ರೀ ಗ್ರಾಮದೇವಿ ರೈತ ಉತ್ಪಾದಕರ ಕಂಪನಿಯ 5ನೇ ವಾರ್ಷಿಕ ಸಾಮಾನ್ಯ ಸಭೆ ಇತ್ತೀಚೆಗೆ ನಡೆಯಿತು.
ಉದ್ಯಮಿ ಡಾ. ಮಹಾದೇವಪ್ಪ ಕರಿದುಗರನವರ ಮಾತನಾಡಿ, ರೈತರು ಕಡಿಮೆ ಖರ್ಚಿನಲ್ಲಿ ಬೆಳೆಯಬಹುದಾದ ಬೆಳೆಗಳನ್ನು ಬೆಳೆಯಬೇಕು. ಅವುಗಳಿಂದ ಹೆಚ್ಚಿನ ಲಾಭ ಗಳಿಸಲು ಸಾಧ್ಯ ಎಂದರು.
ಮನಗು0ಡಿ ವಿರಕ್ತ ಮಠದ ಶ್ರೀ ಅಭಿನವ ಸಿದ್ಧಲಿಂಗ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಫಕ್ಕೀರಪ್ಪ ಬುಡ್ಡಿಕಾಯಿ, ಕಾರ್ಯನಿರ್ವಾಹಕ ಅಽಕಾರಿ ನಾಗಪ್ಪ ಮಾಯನ್ನವರ, ಇತರರಿದ್ದರು.