ಸೋಮವಾರಪೇಟೆ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಆಯೋಜಿಸಿದ್ದ ಸೋಮವಾರಪೇಟೆ ನಾಡು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಎನ್.ಟಿ. ಪರಮೇಶ್ ಮಾತನಾಡಿದರು. ರಮೇಶ್, ಪೊನ್ನಪ್ಪ, ಸೋಮಯ್ಯ ಇದ್ದರು. 
ಜಿಲ್ಲೆ

ಸೋಮವಾರಪೇಟೆಯಲ್ಲಿ ವಾರ್ಷಿಕ ಮಹಾಸಭೆ

ಲೋಕೇಶ್ ಮನು. ಡಿ

ಸೋಮವಾರಪೇಟೆ: ಸೋಮವಾರಪೇಟೆ ನಾಡು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವಾರ್ಷಿಕ ಮಹಾಸಭೆ, ಸಂಘದ ಅಧ್ಯಕ್ಷ ಎನ್.ಟಿ.ಪರಮೇಶ್ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಬುಧವಾರ ಆಯೋಜಿಸಲಾಗಿತ್ತು.

ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ನೂತನ ಕಟ್ಟಡ ನಿರ್ಮಿಸುವ ಯೋಜನೆಯಿದ್ದು, ಎಲ್ಲ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸಹಕರಿಸಬೇಕೆಂದು ಮನವಿ ಮಾಡಿದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಟಿ.ಕೆ. ರಮೇಶ್, ನಿರ್ದೇಶಕರಾದ ಎಸ್.ಪಿ. ಪೊನ್ನಪ್ಪ, ಜಿ.ಬಿ.ಸೋಮಯ್ಯ, ಬಿ.ಎಂ.ರಾಮ್‌ಪ್ರಸಾದ್, ಡಿ.ಎಚ್. ಉಮೇಶ್ ರಾಜೇ ಅರಸ್, ಎಂ.ಸಿ.ರಾಘವ, ಎಸ್.ಎ.ಪ್ರತಾಪ್, ಯು.ಎಂ. ಬಸವರಾಜು, ಎಚ್.ಕೆ.ಸುಜಾತಾ, ಕೆ.ಯು.ಶ್ಯಾಮಲಾ ಸಿಇಒ ರಂಜಿತ್ ಇದ್ದರು.