ಜಿಲ್ಲೆ

ಚನ್ನಪಟ್ಟಣದಲ್ಲಿ ಶೌಚಗೃಹಗಳಿಲ್ಲದೆ ಕಿರಿಕಿರಿ

* ವ್ಯವಸ್ಥೆ ಕಲ್ಪಿಸುವಲ್ಲಿ ನಗರಸಭೆ ನಿರ್ಲಕ್ಷ್ಯ

* ಸಿಕ್ಕಸಿಕ್ಕ ಜಾಗದಲ್ಲಿ ಜಲಬಾಧೆ ತೀರಿಸಿಕೊಳ್ಳುವ ಸ್ಥಿತಿ

ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ತಾಲೂಕು ಕೇಂದ್ರ, ಜನದಟ್ಟಣೆ ಇರುವ ಚನ್ನಪಟ್ಟಣ ನಗರದಲ್ಲೇ ಸಾರ್ವಜನಿಕ ಶೌಚಗೃಹಗಳ ಕೊರತೆ ಕಾಡುತ್ತಿದ್ದು, ಜಲಬಾಧೆ ತೀರಿಸಿಕೊಳ್ಳಲು ಜನ ಕಿರಿಕಿರಿ ಅನು‘ವಿಸುತ್ತಿದ್ದಾರೆ. ಹೌದು... ನಗರ ದಿನಕಳೆದಂತೆ ಬೃಹದ್ಧಾಕಾರವಾಗಿ ವಿಸ್ತಾರಗೊಳ್ಳುತ್ತಿದೆ, ಸರ್ಕಾರಿ ಕಚೇರಿ, ಶಾಲಾ-ಕಾಲೇಜು, ಬ್ಯಾಂಕ್ ಹಾಗೂ ಅಂಗಡಿ ಸೇರಿ ನಿತ್ಯ ವಿವಿ‘ ಕಾರಣಕ್ಕಾಗಿ ಸಾವಿರಾರು ಮಂದಿ ನಗರಕ್ಕೆ ಆಗಮಿಸುತ್ತಾರೆ. ಜಿಲ್ಲೆಯ ಇತರ ನಗರಗಳಿಗೆ ಹೋಲಿಸಿದರೆ, ಚನ್ನಪಟ್ಟಣ ಸಾಕಷ್ಟು ಅಭಿವೃದ್ಧಿ ಹಾದಿಯಲ್ಲಿದ್ದು, ಇಂತಹ ನಗರದಲ್ಲಿ ಸಾರ್ವಜನಿಕ ಶೌಚಗೃಹಗಳು ಸಮರ್ಪಕವಾಗಿಲ್ಲ ಎನ್ನುವುದು ದುರಂತ.

ಇಡೀ ನಗರಕ್ಕೆ ಎರಡೇ!

ನಗರದ ಸರ್ಕಾರಿ ಬಸ್ ನಿಲ್ದಾಣ ಹೊರತುಪಡಿಸಿ, ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣ ಹಾಗೂ ನಗರಸಭೆ ಆವರಣದಲ್ಲಿ ಮಾತ್ರ ಸಾರ್ವಜನಿಕ ಶೌಚಗೃಹಗಳಿವೆ. ಇವುಗಳನ್ನು ಹೊರತುಪಡಿಸಿ, ಸದ್ಯ ಬೇರೆಲ್ಲೂ ಸಾರ್ವಜನಿಕ ಶೌಚಗೃಹಗಳಿಲ್ಲ. ಪರಿಣಾಮ ಸಾರ್ವಜನಿಕರು ಸಿಕ್ಕಸಿಕ್ಕ ಜಾಗದಲ್ಲಿ ಜಲಬಾಧೆ ತೀರಿಸಿಕೊಳ್ಳುತ್ತಿದ್ದಾರೆ. ಇನ್ನಾದರೂ ನಗರದ ಆಯಕಟ್ಟಿನ ಜಾಗದಲ್ಲಿ ಸುಲಭ ಶೌಚಗೃಹಗಳ ವ್ಯವಸ್ಥೆಯಾದರೆ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ತಪ್ಪಲಿದೆ, ನಗರವೂ ಸ್ವಚ್ಛವಾಗಿರಲಿದೆ. ಹಾಗಾಗಿ ನಗರಸಭೆಯು ಸಾರ್ವಜನಿಕ ಶೌಚಗೃಹಗಳ ನಿರ್ಮಾಣಕ್ಕೆ ಒತ್ತು ನೀಡಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

ಜಾಗ ಇಲ್ಲವಂತೆ!

ಒಂದು ಕಡೆ ಚಿಕ್ಕಮಳೂರಿನಿಂದ ಹನುಮಂತನಗರದವರೆಗೆ, ಇನ್ನೊಂದೆಡೆ ಸುಣ್ಣಘಟ್ಟವರೆಗೆ ನಗರ ಹರಡಿದೆ. ಸರ್ಕಾರಿ ಬಸ್ ನಿಲ್ದಾಣದಲ್ಲಿ ಪಾವತಿಸಿ ಉಪಯೋಗಿಸುವ ಶೌಚಗೃಹ ಹಾಗೂ ತಾಲೂಕು ಕಚೇರಿಯ ಮುಂಭಾಗವೊಂದು ಶೌಚಗೃಹವಿದೆ. ಈ ಸ್ಥಳಗಳನ್ನು ಹೊರತುಪಡಿಸಿ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಾದ ನಗರಸಭೆ ಈ ವಿಚಾರದಲ್ಲಿ ನಿರ್ಲಕ್ಷ್ಯವಹಿಸಿದೆ.

ಕಾಲೇಜು ರಸ್ತೆಯೇ ಮೂತ್ರಾಲಯ!

ಅಂಚೆ ಕಚೇರಿ ರಸ್ತೆಯಿಂದ ಬಾಲಕರ ಪಿಯು ಕಾಲೇಜು ಹಾಗೂ ಶತಮಾನೋತ್ಸವ ‘ವನಕ್ಕೆ ಹೋಗುವ ರಸ್ತೆ ಮೂತ್ರ ವಿಸರ್ಜನೆ ತಾಣವಾಗಿ ಮಾರ್ಪಟ್ಟಿದ್ದು, ಶಾಲಾ-ಕಾಲೇಜಿಗೆ ನಿತ್ಯ ಸಾವಿರಾರು ವಿದ್ಯಾರ್ಥಿಗಳ ಜತೆಗೆ ಆವರಣದಲ್ಲಿರುವ ಶತಮಾನೋತ್ಸವ ‘ವನದಲ್ಲಿ ಹಲವಾರು ಕಾರ್ಯಕ್ರಮಗಳು ಜರುಗುವ ಹಿನ್ನೆಲೆ ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ಕಾಲೇಜು ಆವರಣ ಮೈದಾನದಲ್ಲಿ ಪ್ರತಿದಿನ ಮುಂಜಾನೆ ಮತ್ತು ಸಂಜೆ ವಾಯುವಿಹಾರ ಹಾಗೂ ಕ್ರಿಕೆಟ್ ಸೇರಿ ವಿವಿಧ ಆಟ ಆಡಲು ಬರುವವರು, ಶಿಕ್ಷಕರು, ಸಾರ್ವಜನಿಕರು ಮೂಗುಮುಚ್ಚಿಕೊಂಡೇ ಓಡಾಡುವಂತಾಗಿದೆ. ರಸ್ತೆಯ ಒಂದು ಬದಿಯಲ್ಲಿ ಚರ್ಚ್‌ನ ಕಾಂಪೌಂಡ್, ಮತ್ತೊಂದೆಡೆ ಖಾಸಗಿ ಬಸ್ ನಿಲ್ದಾಣದ ಜಾಗಕ್ಕೆ ತಗಡಿನ ಶೀಟ್ ಅಳವಡಿಸಿರುವುದರಿಂದ ಮಾರ್ಗ ದಿನೇದಿನೆ ಮೂತ್ರ ವಿಸರ್ಜನೆ ತಾಣವಾಗುತ್ತಿದ್ದು, ಗಬ್ಬು ದುರ್ನಾತವಲ್ಲದೆ ರಸ್ತೆಯಲ್ಲಿ ಸಂಚರಿಸುವದೇ ಅಸಹ್ಯಕರ ಎನಿಸಿದೆ. ಮಹಿಳೆಯರು, ವಿದ್ಯಾರ್ಥಿನಿಯರಂತೂ ರಸ್ತೆಯಲ್ಲಿ ಸಂಚರಿಸುವುದಕ್ಕೆ ಮುಜುಗರ ಪಡುವಂತಾಗಿದೆ.

ವಾಯುವಿಹಾರಿ

ಶಾನುಭೋಗನಹಳ್ಳಿ ಸತೀಶ್

ಬಾಲಕರ ಪಿಯು ಕಾಲೇಜು ರಸ್ತೆಯಲ್ಲಿ ನಿತ್ಯ ಮೂತ್ರ ವಿಸರ್ಜನೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ರಸ್ತೆಯಲ್ಲಿ ಸಂಚರಿಸಲು ಅಸಹ್ಯ ಎನಿಸುತ್ತಿದೆ. ಮಾರ್ಗದಲ್ಲಿ ವಿಪರೀತ ಗಬ್ಬುವಾಸನೆ ಬೀರುತ್ತಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸಾರ್ವಜನಿಕರ ಮೂತ್ರ ವಿಸರ್ಜನೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು.

ಹೊರಗಿನಿಂದ ನಗರಕ್ಕೆ ಬರುವವರಿಗೆ ಸಾರ್ವಜನಿಕ ಶೌಚಗೃಹಗಳಿಲ್ಲದ ಕಾರಣ ಸಮಸ್ಯೆಯಾಗುತ್ತಿದೆ. ಅದರಲ್ಲೂ ಮಹಿಳೆಯರ ಪರಿಸ್ಥಿತಿ ಹೇಳತೀರದಾಗಿದೆ. ಸ್ಥಳೀಯ ಆಡಳಿತ ನಗರದ ಅಲ್ಲಲ್ಲಿ ಸಾರ್ವಜನಿಕ ಶೌಚಗೃಹಗಳನ್ನು ನಿರ್ಮಿಸುವತ್ತ ಗಮನ ಹರಿಸಬೇಕು. ವಿಮಲಾಯೋಗ ಸಾರ್ವಜನಿಕರು

ನಗರಸಭೆ ಅಧ್ಯಕ್ಷ

ವಾಸಿಲ್ ಆಲಿಖಾನ್

ನಗರದಲ್ಲಿ ಸಾರ್ವಜನಿಕ ಶೌಚಗೃಹಗಳನ್ನು ನಿರ್ಮಿಸಲು ಯೋಜಿಸಲಾದರೂ ಸೂಕ್ತ ಜಾಗದ ಕೊರತೆ ಕಾಡುತ್ತಿದೆ. ಆದರೂ ಮಹದೇಶ್ವರ ದೇಗುಲ ಬಳಿ ಹಾಗೂ ಪೊಲೀಸ್ ಠಾಣೆ ಬಳಿ ಶೌಚಗೃಹಗಳ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದ್ದು, ಇದರಂತೆ ಸಾರ್ವಜನಿಕರ ದಟ್ಡಣೆ ಇರುವಲ್ಲಿ ಜಾಗ ಲ‘್ಯವಾದರೆ, ಶೌಚಗೃಹ ನಿರ್ಮಿಸುತ್ತೇವೆ.