ರಾಮನಗರ: ವಿವಿಧ ಕಾರಣಗಳಿಗಾಗಿ ತೆರವಾಗಿರುವ ಜಿಲ್ಲೆಯ ವಿವಿಧ 14 ಗ್ರಾಮ ಪಂಚಾಯತಿಗಳ, 21 ಸ್ಥಾನಗಳಿಗೆ ರಾಜ್ಯ ಚುನಾವಣಾ ಆಯೋಗ ಚುನಾವಣೆಯನ್ನು ಘೋಷಣೆ ಮಾಡಿದೆ.
ರಾಜೀನಾಮೆ, ಅಕಾಲಿಕ ಮರಣ ಸೇರಿದಂತೆ ಇತರೆ ಕಾರಣಗಳಿಂದ ಜಿಲ್ಲೆಯ 14 ಗ್ರಾಮ ಪಂಚಾಯತಿಗಳ 21 ಸ್ಥಾನಗಳಿಗೆ ನ.23ರಂದು ಮತದಾನ ನಡೆಯಲಿದ್ದು, ನ. 26ರಂದು ಮತ ಎಣಿಕೆ ಕಾರ್ಯವೂ ನಡೆಯಲಿದೆ.
ಚುನಾವಣಾ ವೇಳಾ ಪಟ್ಟಿ
ನ.06ರಂದು ಚುನಾವಣಾ ಅಧಿಸೂಚನೆ ಹೊರ ಬೀಳಲಿದ್ದು, ನ.12ರಿಂದ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ನ.13ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನ.15ರಂದು ನಾಮಪತ್ರ ವಾಪಾಸ್ಗೆ ಕಡೆಯ ದಿನ. ನ.23ರಂದು ಅಗತ್ಯ ಬಿದ್ದರೆ ಮತದಾನ ನಡೆಯಲಿದೆ. ಮತದಾನವು ಬೆಳಿಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ನಡೆಯಲಿದೆ. ಅಗತ್ಯ ಇದ್ದರೆ ನ.25ರಂದು ಮರು ಮತದಾನ ನಡೆಯಲಿದ್ದು, ನ.26ರಂದು ಮತ ಎಣಿಕೆ ಕಾರ್ಯ ನಡೆದು ಲಿತಾಂಶ ಘೋಷಣೆ ಆಗಲಿದೆ.
ಯಾವ ಕ್ಷೇತ್ರಗಳು?
ಕನಕಪುರ ತಾಲೂಕು ಹೊಸದುರ್ಗ ಗ್ರಾಪಂನ 5 ಸ್ಥಾನಗಳು, ಮರಳೇ ಬೇಕುಪ್ಪೆ, ಕೋಡಿಹಳ್ಳಿ, ಐ ಗೊಲ್ಲಹಳ್ಳಿ, ನಲ್ಲಹಳ್ಳಿ, ಬನ್ನಿಮುಕ್ಕೋಡ್ಲೂ ಚಾಕನಹಳ್ಳಿ, ಶಿವನಹಳ್ಳಿ ಗ್ರಾಪಂಗಳ ತಲಾ ಒಂದು ಸ್ಥಾನ, ಅರಕೆರೆ ಗ್ರಾಪಂನ 2 ಮತ್ತು ಉಯ್ಯಂಬಳ್ಳಿ ಗ್ರಾಪಂನ 3 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಮಾಗಡಿಯ ಕಲ್ಯಾ, ಅಗಲಕೋಟೆ ಗ್ರಾಪಂನ ತಲಾ ಒಂದು, ಚನ್ನಪಟ್ಟಣ ತಾಲೂಕಿನ ಎಚ್ ಬ್ಯಾಡರಹಳ್ಳಿ, ಸುಳ್ಳೇರಿ ಗ್ರಾಪಂನ ತಲಾ ಒಂದು ಸ್ಥಾನಕ್ಕೆ ಚುನಾವಣೆ ದಿನಾಂಕ ನಿಗಧಿಯಾಗಿದೆ.