ಕೊಕ್ಕರ್ಣೆ: ನಾಲ್ಕೂರು ಲೋಕಬಂಧು ಪ್ರತಿಷ್ಠಾನದ ಪ್ರಥಮ ವರ್ಷದ ವಾರ್ಷಿಕೋತ್ಸವ ಜೂನ್ 1ರಂದು ಮಾರಾಳಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಜರುಗಲಿರುವುದು. ಬೆಳಗ್ಗೆ 8.30ರಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ವೃತ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ನಾಲ್ಕೂರು ಲೋಕಬಂಧು ಪ್ರತಿಷ್ಠಾನದ ಅಧ್ಯಕ್ಷ ವಿನಾಯಕ ಉಡುಪ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಸುರತ್ಕಲ್ ಶ್ರೀ ಗೋವಿಂದದಾಸ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಪಿ.ವೆಂಕಟರಮಣ ರಾವ್ ಧಾರ್ಮಿಕ ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ನಾಲ್ಕೂರು ಗ್ರಾಪಂ ಅಧ್ಯಕ್ಷೆ ಶೋಭಾ ಕೆ.ಪೂಜಾರಿ, ಸೂರಾಲು ವಲಯ ವಿಪ್ರ ಟ್ರಸ್ಟ್ ಅಧ್ಯಕ್ಷ ಮಂಜುನಾಥ್ ಹೆಬ್ಬಾರ್ ಪೇತ್ರಿ, ಸಂಗೀತ ಗುರು ಅನುರಾಧಾ ಮಯ್ಯ ಹಿಲಿಯಾಣ, ಭರತನಾಟ್ಯ ಗುರು ವಿಶ್ವರೂಪ ಮಧ್ಯಸ್ಥ ನೀಲಾವರ, ಪುರೋಹಿತ ಪ್ರಕಾಶ ಮಧ್ಯಸ್ಥ, ಮುದ್ದೂರು ವಿಎಸ್‌ಎಸ್ ಮುಖ್ಯಸ್ಥ ಪ್ರತಾಪ ಹೆಗ್ಡೆ ಮಾರಾಳಿ, ಮಾರಾಳಿ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿವೇಕಾನಂದ ಶೆಟ್ಟಿ ಮತ್ತಿತರರು ಉಪಸ್ಥಿತರಿರುವರು. ನಾಟಿ ವೈದ್ಯ ನೀಲಕಂಠ ವೈದ್ಯ ಮುದ್ದೂರು ಅವರಿಗೆ ಗೌರವಾರ್ಪಣೆ, ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಜರುಗಲಿರುವುದು ಎಂದು ನಾಲ್ಕೂರು ಲೋಕಬಂಧು ಪ್ರತಿಷ್ಠಾನದ ಅಧ್ಯಕ್ಷ ವಿನಾಯಕ ಉಡುಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.