ನರೇಗಲ್ಲ: ಇಲ್ಲಿನ ನಿವೃತ್ತ ನೌಕರರ ಸಂಘ ಹಾಗೂ ಹಿರಿಯ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕೋತ್ಸವವನ್ನು ಜ.12ರಂದು ಬೆಳಗ್ಗೆ 10.30ಕ್ಕೆ ಪಟ್ಟಣದ ಹಿರೇಮಠದ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ದೊಡ್ಡಯ್ಯ ಅರವಟಗಿಮಠ ತಿಳಿಸಿದರು.
ಪಟ್ಟಣದ ಶ್ರೀ ರೇಣುಕಾಚಾರ್ಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಂಘದ ಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು.
ಸಮಾರಂಭದ ಸಾನ್ನಿಧ್ಯವನ್ನು ಮಲ್ಲಿಕಾರ್ಜುನ ಶಿವಾಚಾರ್ಯರು ವಹಿಸುವರು. ಉಪನ್ಯಾಸಕರಾಗಿ ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಕೆ.ಎ. ಬಳಿಗೇರ, ಜಿಲ್ಲಾ ನಿವೃತ್ತ ಸಂಘದ ಪದಾಧಿಕಾರಿಗಳು ಪಾಲ್ಗೊಳ್ಳಲ್ಲಿದ್ದಾರೆ ಎಂದರು.
ನಿಕಟಪೂರ್ವ ಅಧ್ಯಕ್ಷ ಡಾ. ಆರ್.ಕೆ. ಗಚ್ಚಿನಮಠ, ನಿವೃತ್ತ ಶಿಕ್ಷಕ ಎಂ.ಎ. ಹಿರೆವಡೆಯರ, ನಿವೃತ್ತ ಮುಖ್ಯ ಶಿಕ್ಷಕ ಸಿ ವಿ. ವಂಕಲಕುಂಟಿ, ನಿವೃತ್ತ ಶಿಕ್ಷಕ ಸಿ.ಎಂ. ಕುಲಕರ್ಣಿ ಮಾತನಾಡಿದರು.
ಜಿಲ್ಲಾ ನಿವೃತ್ತ ನೌಕರರ ಸಂಘದಿಂದ ಪ್ರಕಟಿಸಿದ 2025ರ ದಿನದರ್ಶಿಕೆ ಬಿಡುಗಡೆಗೊಳಿಸಲಾಯಿತು. ಚಂದ್ರಾಮ ಗ್ರಾಮಪುರೋಹಿತ, ಕೆ.ಕೆ. ದಾಸರ, ಎಸ್.ಆರ್. ಬಾಗಲಿ, ಎಸ್.ಬಿ. ಹೊಸಮನಿ, ಎಸ್.ಕೆ. ಪಾಟೀಲ, ಕೆ.ಎಸ್. ಕಳಕೊಣ್ಣವರ, ಎಸ್.ಬಿ. ಹಿರೇಮಠ, ಎನ್.ಎಚ್. ಚಿಕ್ಕನಗೌಡರ, ವೀರಪ್ಪ ಕುಂಬಾರ, ವಿ.ಎಸ್. ಕೊಟಗಿ, ವಿ.ಬಿ. ಹಕ್ಕಿ, ಬಿ.ಎಸ್. ಉಪ್ಪಿನ ಇತರರಿದ್ದರು. ವೀರಭದ್ರಪ್ಪ ಕೆರಿಯವರ ನಿರೂಪಿಸಿದರು. ಬಿ. ಎ. ಕಲಾಲಬಂಡಿ ಸ್ವಾಗತಿಸಿದರು, ಶಿವಯೋಗಿ ಜಕ್ಕಲಿ ವಂದಿಸಿದರು.