ಉಪ್ಪಿನಂಗಡಿ: ವಿಶ್ವಶ್ರೇಷ್ಠ ಭಾರತೀಯ ಜೀವನ ಮೌಲ್ಯಗಳ ಮಹತ್ವ ತಿಳಿಸುವ ಮೂಲಕ ಮನುಷ್ಯನನ್ನು ನಿಜವಾದ ಮನುಷ್ಯನನ್ನಾಗಿಸುವ ಅನಿವಾರ್ಯತೆ ಎದುರಾಗಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಪ್ರತಿಪಾದಿಸಿದರು.
ಸೋಮವಾರ ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್ ಪ್ರಸಾದ್ ಮುಖ್ಯ ಅತಿಥಿಯಾಗಿದ್ದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳನ್ನು, ಸರ್ವಾಂಗೀಣ ಸಾಧನೆ ತೋರಿದ ವಿದ್ಯಾರ್ಥಿ ಸುಮಂತ್ ಶೆಟ್ಟಿಯನ್ನು ಇಂದ್ರ ಧನುಷ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಕರುಣಾಕರ ಸುವರ್ಣ, ಸಂಚಾಲಕ ಸುಬ್ರಹ್ಮಣ್ಯ ಭಟ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ಸದಸ್ಯೆ ಡಾ.ಸುಧಾ ರಾವ್, ಇಂದ್ರಪ್ರಸ್ಥ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ.ಎಚ್.ಕೆ.ಪ್ರಕಾಶ್, ಮುಖ್ಯಶಿಕ್ಷಕಿ ವೀಣಾ ಆರ್.ಪ್ರಸಾದ್, ಕಾಲೇಜು ವಿದ್ಯಾರ್ಥಿ ನಾಯಕ ಯಶ್ವಿತ್ ಉಪಸ್ಥಿತರಿದ್ದರು.
ಗಣ್ಯರಾದ ಡಾ.ನಿರಂಜನ್ ರೈ, ಡಾ.ಸುಪ್ರಿತಾ ರೈ, ಸುದರ್ಶನ್, ಹರಿರಾಮಚಂದ್ರ, ಸುಂದರ ಗೌಡ , ಐ.ಚಿದಾನಂದ ನಾಯಕ್, ರಾಜೇಶ್ ರೈ, ಸುನೀಲ್ ಅನಾವು, ಧನ್ಯಕುಮಾರ್ ರೈ, ಯು.ಜಿ.ರಾಧಾ, ಸುಧಾಕರ ಶೆಟ್ಟಿ, ವಿದ್ಯಾಧರ ಜೈನ್, ಯು.ರಾಜೇಶ್ ಪೈ, ಸುರೇಶ್ ಜಿ, ಕೆ.ವಿ.ಪ್ರಸಾದ್, ಜಯಂತ ಪುರೋಳಿ, ರವಿ ಇಳಂತಿಲ, ಜನಾರ್ದನ ಗೌಡ ಅಣ್ಣಾಜೆ, ಗುಣಕರ ಅಗ್ನಾಡಿ, ಜಯಪ್ರಕಾಶ್ ಕಡಮಾಜೆ, ವಂದನಾ ಶರತ್, ಆದೇಶ್ ಶೆಟ್ಟಿ ಮೊದಲಾದವರಿದ್ದರು.
ಉಪನ್ಯಾಸಕಿಯರಾದ ಸ್ವಾತಿ ಹಾಗೂ ಸುಂದರಿ ನಿರೂಪಿಸಿದರು. ವೀಣಾ ಆರ್.ಪ್ರಸಾದ್ ಸ್ವಾಗತಿಸಿದರು. ಯಶ್ವಿತ್ ವಂದಿಸಿದರು.