ಜಿಲ್ಲೆ

ಮಕ್ಕಳ ಪ್ರತಿಭಾ ವಿಕಸನಕ್ಕೆ ವಾರ್ಷಿಕೋತ್ಸವ ಪ್ರೇರಣೆ

ಇಂದಿರಾ ಎನ್ ಕೆ

ಅಮಾಸೆಬೈಲು : ಮಕ್ಕಳ ಪ್ರತಿಭೆ, ಶಾಲೆ ಹಾಗೂ ಊರಿನ ಗೌರವ ಹೆಚ್ಚಿಸುವಲ್ಲಿ ಶಾಲಾ ವಾರ್ಷಿಕೋತ್ಸವ ಹೆಚ್ಚಿನ ಪ್ರೇರಣೆ ನೀಡುತ್ತವೆ ಎಂದು ಹುಬ್ಬಳ್ಳಿ ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ ಹೇಳಿದರು.

ಅಮಾಸೆಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 70ರ ವೈಭವ ಭಾವ ಬಣ್ಣಗಳ ಸಂಗಮಾಚರಣೆ ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು.

ಶಾಸಕ ಎ.ಕಿರಣ್‌ಕುಮಾರ ಕೊಡ್ಗಿ ಅಧ್ಯಕ್ಷತೆ ವಹಿಸಿದರು. ಅಡುಗೆ ಸಹಾಯಕಿಯರಾದ ಲಕ್ಷ್ಮೀ, ನಾಗರತ್ನ, ಪ್ರಮೀಳಾ, ನಾಗರತ್ನ, ವಾಹನ ಚಾಲಕ ಕೃಷ್ಣ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಉದ್ಯಮಿ ಬಿ.ಸತೀಶ ಕಿಣಿ, ಅಮಾಸೆಬೈಲು ಗ್ರಾಪಂ ಅಧ್ಯಕ್ಷೆ ಮಲ್ಲಿಕಾ ಕುಲಾಲ, ಉಪಾಧ್ಯಕ್ಷ ಶಂಕರ ಪೂಜಾರಿ, ಸದಸ್ಯ ಕೃಷ್ಣ ಪೂಜಾರಿ, ಸದಸ್ಯೆ ಪ್ರೇಮಾ ನಾಯ್ಕ, ಸುಮತಿ ಪೂಜಾರಿ, ವಿದ್ಯಾಂಗ ಉಪನಿರ್ದೇಶಕ ಗಣಪತಿ ಕೆ., ಕರುಣಾಕರ ಹೆಗ್ಡೆ, ಬಿ.ಕೆ.ನರಸಿಂಹ ಶೆಟ್ಟಿ, ಶಿಕ್ಷಣ ಸಂಯೋಜಕ ಶೇಖರ ಯು., ಸದಾನಂದ ಶೆಟ್ಟಿ, ಲಕ್ಷ್ಮಣ ಪೂಜಾರಿ, ಎಸ್‌ಡಿಎಂಸಿ ಅಧ್ಯಕ್ಷ ಸುಕೇಶ ಭಂಡಾರಿ, ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ಶಂಕರ್ ಐತಾಳ, ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಆರ್.ನವೀನಚಂದ್ರ ಶೆಟ್ಟಿ, ವಿದ್ಯಾರ್ಥಿ ನಾಯಕಿ ಶ್ರೀನಿಧಿ, ಪ್ರಭಾರ ಮುಖ್ಯ ಶಿಕ್ಷಕ ಶಶಿಧರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಬೆಳಗ್ಗೆ ಅಮಾಸೆಬೈಲು ಗ್ರಾಪಂ ಅಧ್ಯಕ್ಷೆ ಮಲ್ಲಿಕಾ ಕುಲಾಲ ಧ್ವಜಾರೋಹಣ ನೆರವೇರಿಸಿದರು.

ಉಪನಿರೀಕ್ಷಕ ಅಶೋಕಕುಮಾರ್, ಲಕ್ಷ್ಮೀ ನಾರಾಯಣ ಕಾಶಿ, ಹರ್ಷ ಪೂಜಾರಿ, ಸತ್ಯನಾರಾಯಣ ಜೆ. ಪಾಲ್ಗೊಂಡಿದ್ದರು. ಮುಖ್ಯ ಶಿಕ್ಷಕ ಶಶಿಧರ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕಿ ಸವಿತಾ ವರದಿ ವಾಚಿಸಿದರು. ಗೀತಾ ಹೆಗ್ಡೆ, ಅರ್ಪಿತಾ ಕಾರ್ಯಕ್ರಮ ನಿರೂಪಿಸಿದರು. ಶೀಲಾ ಅಭಿಷೇಕ್ ವಂದಿಸಿದರು.