ಸರಗೂರು ಪಟ್ಟಣದ ಶ್ರೀ ದೇವರಾಜುಸ್ವಾಮಿ ವಿದ್ಯಾಮಂದಿರ ಟ್ರಸ್ಟ್ ಹಾಗೂ ದೇವರಾಜುಸ್ವಾಮಿ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಶಾಸಕ ಅನಿಲ್ ಚಿಕ್ಕಮಾದು ಉದ್ಘಾಟಿಸಿದರು. ಡಾ.ಷಡಕ್ಷರ ಸ್ವಾಮೀಜಿ, ಚನ್ನಬಸವಸ್ವಾಮೀಜಿ, ರುಕೀಯಾ ಬೇಗಂ, ಶಿವರಾಜಪ್ಪ ಇತರರು ಇದ್ದರು. 
ಜಿಲ್ಲೆ

ಶಿಕ್ಷಣ ಆರೋಗ್ಯ ಅತ್ಯಮೂಲ್ಯ

ನಾಗೇಶ ಎಸ್

ಸರಗೂರು: ಪ್ರಸ್ತುತ ಕಾಲಘಟ್ಟದಲ್ಲಿ ಶಿಕ್ಷಣ ಹಾಗೂ ಆರೋಗ್ಯ ಅತ್ಯಮೂಲ್ಯವಾಗಿದ್ದು, ವಿದ್ಯಾರ್ಥಿಗಳು ಇದರ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ಸಲಹೆ ನೀಡಿದರು.

ಪಟ್ಟಣದ ಶ್ರೀದೇವರಾಜುಸ್ವಾಮಿ ವಿದ್ಯಾಮಂದಿರ ಟ್ರಸ್ಟ್ ಹಾಗೂ ದೇವರಾಜು ಸ್ವಾಮಿ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯ 6ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದ ಅವರು, ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಸಂಸ್ಥೆಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ದೇವರಾಜುಸ್ವಾಮಿ ವಿದ್ಯಾಮಂದಿರ ಟ್ರಸ್ಟ್ ಸ್ಥಾಪಕ ಡಾ.ಷಡಕ್ಷರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಹಸೀಲ್ದಾರ್ ರುಕೀಯಾ ಬೇಗಂ, ಅಖಿಲ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಡಿ.ಜಿ.ಶಿವರಾಜಪ್ಪ ಮಾತನಾಡಿದರು.

ಹಂಚೀಪುರ ಮಠದ ಶ್ರೀ ಚನ್ನಬಸವ ಸ್ವಾಮೀಜಿ, ದೇವರಾಜುಸ್ವಾಮಿ ಟ್ರಸ್ಟ್ ಕಾರ್ಯದರ್ಶಿ ಗುರುಸ್ವಾಮಿ, ಪಪಂ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಉಪಾಧ್ಯಕ್ಷ ವಿನಾಯಕ ಪ್ರಸಾದ್, ಸದಸ್ಯೆ ಹೇಮಾವತಿ ರಮೇಶ್, ಶ್ರೀನಿವಾಸ, ಚನ್ನಬಸವ ದೇವರು, ನಂಜುಂಡಪ್ಪ, ಕೆಂಡಗಣ್ಣಸ್ವಾಮಿ, ಬಾಡಗ ಸಿದ್ದಪ್ಪ, ಗುರುಸ್ವಾಮಿ, ಶೇಖರ್, ಮಾದಪ್ಪ, ಕೆ.ಬಸವಪ್ಪ, ವೀರಭದ್ರಪ್ಪ, ಎಚ್.ಎಸ್.ನಟರಾಜು, ಪ್ರಕಾಶ್, ಮಹದೇವಪ್ಪ ಇತರರು ಇದ್ದರು.