ಜಿಲ್ಲೆ

ಜೈನ್ ಮಂದಿರದ ವಾರ್ಷಿಕೋತ್ಸವ ಸಂಭ್ರಮ

ಮುಂಡರಗಿ: ಪಟ್ಟಣದ ಜೈನ್ ಮಂದಿರದ 19ನೇ ವಾರ್ಷಿಕೋತ್ಸವ ಪ್ರಯುಕ್ತ ಮಂದಿರದ ಧ್ವಜಾರೋಹಣವನ್ನು ಬುಧವಾರ ಗೌತಮಚಂದ್ ಚೋಪ್ರಾ ನೆರವೇರಿಸಿ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಜೈನ್ ಮಂದಿರದ ಶ್ರೀ ವಾಸುಪೂಜ್ಯಸ್ವಾಮಿ ಮೂರ್ತಿಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿಸಲಾಯಿತು. ಅಲ್ಪೇಶ್ ಗುರೂಜಿ ಪೂಜಾ ಕೈಂಕರ್ಯಗಳನ್ನು ನಡೆಸಿಕೊಟ್ಟರು. ಶಕುಂತಲಾದೇವಿ ಚೋಪ್ರಾ, ಪವನ ಚೋಪ್ರಾ, ಪಾರ್ಸಮಾಲ್ ಮೆಹತಾ, ದಿಲೀಪ್ ಬನಸಾಲಿ, ಸುರೇಶ ಜೈನ್, ಡಾ.ಬಿ.ಜಿ. ಜವಳಿ, ಕೊಟ್ರೇಶ ಅಂಗಡಿ, ಈಶಣ್ಣ ಬೆಟಗೇರಿ, ಹೀರಾಚಂದ್ ಜೈನ್, ರತನ್ ತಾತೇಡೆ, ಮೋಹನಲಾಲ್ ಜೈನ್, ಸಾಹೀರಾ ದೇವಿ, ಮಹಿತ, ಪ್ರಿಯಾಂಕ ಜೈನ್, ಅಂಕಿತ ಚೋಪ್ರಾ, ಪೂಜಾ ಪುನಂ, ಕಾಂತದೇವಿ ಜೈ, ವೀರಣ್ಣ ಮೇಟಿ, ಪ್ರಕಾಶ ಸೋಲಂಕಿ, ಜಯಂತಿಲಾಲ್ ಜೈನ್, ಇತರರಿದ್ದರು.