Invitation to a poetry competition 
ಜಿಲ್ಲೆ

ವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನ ಸಮಾರಂಭ

ಗಿರೀಶ ಸಗರ

ಕೊಲ್ಹಾರ: ತಾಲೂಕಿನ ಮುಳವಾಡದಲ್ಲಿ ರೇಣುಕಾದೇವಿ ಗ್ರಾಮೀಣ ಅಭಿವೃದ್ಧಿ ಶಿಣ ಸಂಸ್ಥೆಯ ಶಿವರಾಯ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಾರ್ಷಿಕೋತ್ಸವ ಹಾಗೂ ಶಿವರಾಯ ಪ್ರಶಸ್ತಿ ಪ್ರದಾನ ಸಮಾರಂಭ ಫೆ. 18 ರಂದು ನಡೆಯಲಿದೆ.

ಮನಗೂಳಿಯ ಅಭಿನವ ಸಂಗನಬಸವ ಶಿವಾಚಾರ್ಯರು ಹಾಗೂ ಮಲಘಾಣದ ಸದಾನಂದ ಮಹಾರಾಜರು ಸಾನ್ನಿಧ್ಯ ವಹಿಸುವರು.

ಣಮಂತ ಕಳಸಗೊಂಡ ಅಧ್ಯಕ್ಷತೆ ವಹಿಸುವರು. ತಾನಾಜಿ ನಾಗರಾಳ ಉದ್ಘಾಟಿಸುವರು. ಬಿ. ಪಿ. ಕೆಂಗನಾಳ, ಸೋಮನಾಥ ಕಳ್ಳಿಮನಿ, ಸುರೇಶ ಬಿರಾದಾರ, ಅಪ್ಪಣ ಐಹೊಳಿ, ಚನ್ನಪ್ಪ ಗೌಡ ಬಿರಾದಾರ, ಕರಿಯಪ್ಪ ಜೈನಾಪೂರ, ಮಲ್ಲು ಚೌದ್ರಿ, ಸಂಗನಗೌಡ ಪಾಟೀಲ, ಸಂಗಮೇಶ ಕಳಸಗೊಂಡ, ಪರಸುರಾಮ ಮಲಘಾಣ, ಮಹ್ಮದಗೌಸ್​ ಹವಾಲ್ದಾರ ಆಗಮಿಸುವರು.

ಸಾಹಿತಿ ಜಂಬುನಾಥ ಕಂಚ್ಯಾಣಿ, ವೈದ್ಯ ಸಂಜೀವ ಕೆ. ಯಡಹಳ್ಳಿ, ಕಲಾವಿದ ಲಾಲಸಾಬ ಜೈನಾಪುರ, ಮಾಜಿ ಸೈನಿಕ ಮಂಜುನಾಥ ಹೊಸಮನಿ, ಪಿಕೆಪಿಎಸ್​ ಮ್ಯಾನೇಜರ್​ ಸಂಗಮೇಶ ಬಿಜಾಪುರ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದೆಂದು ಪ್ರಕಟಣೆ ತಿಳಿಸಿದೆ.