ಕೊಟ್ಟೂರು ಶ್ರೀಜಿನ ಕುಶಲ ಸುರಿ ಜೈನ ಮಂದಿರದ 22ನೇ ವಾರ್ಷಿಕೋತ್ಸವದ ಅಂಗವಾಗಿ ಬೆಳ್ಳಿರಥದಲ್ಲಿ ಕುಶಲ ಸುರಿ ದೇವರನ್ನು ಬೆಳ್ಳಿ ರಥದಲ್ಲಿ ಕೂಡಿಸಿ ಅದ್ದೂರಿ ಮೆರವಣಿಗೆ ಮಾಡಲಾಯಿತು. 
ಜಿಲ್ಲೆ

ವಾರ್ಷಿಕೋತ್ಸವ ಅಂಗವಾಗಿ ಮೆರವಣಿಗೆ

ರುದ್ರಪ್ಪ ವಾಲಿ

ಕೊಟ್ಟೂರು: ಪಟ್ಟಣದ ಶ್ರೀಜಿನ ಕುಶಲ ಸುರಿ ಜೈನ ಮಂದಿರದ 22ನೇ ವಾರ್ಷಿಕೋತ್ಸವದ ಅಂಗವಾಗಿ ಇಲ್ಲಿನ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ನಡೆಯಿತು. ವಾರ್ಷಿಕೋತ್ಸವದ ಅಂಗವಾಗಿ ಶುಕ್ರವಾರ ಧ್ವಜಾರೋಹಣ ನೆರವೇರಿಸಿದ ನಂತರ ಜೈನ ಸಮಾಜದವರು ದೇವಾಲಯದಲ್ಲಿ ರಾತ್ರಿಯಿಂದ ಬೆಳಗಿನ ಜಾವದ ತನಕ ವಿಶೇಷ ಜಾಗರಣೆ ಮಾಡಿದರು.

ಧರ್ಮಗುರುಗಳಾದ ಪೂರ್ಣಪ್ರಭಾ ಶ್ರೀಜಿ ಅವರು ದೀಕ್ಷೆ ಪಡೆದ 50 ವರ್ಷದ ವರ್ಷಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ದೇವಾಲಯದ ಮುಂದೆ ಶನಿವಾರ ಧ್ವಜಾರೋಹಣ ನೆರವೇರಿಸಿದ ನಂತರ ವಿಶೇಷ ಪೂಜೆ ಆರತಿ ನಡೆಯಿತು. ನಂತರ ಬೆಳ್ಳಿ ರಥದಲ್ಲಿ ಶ್ರೀಜಿನ ಕುಶಲ ಸುರಿ ದೇವರನ್ನು ಕೂಡಿಸಿ ಮೆರವಣಿಗೆ ಮಾಡಲಾಯಿತು.

ಧರ್ಮಗುರು ಸೂರ್ಯಪ್ರಭಾಶ್ರೀಜಿ, ಪ್ರಮುಖರಾದ ಬಾಬು ಲಾಲ್ ಜೈನ್, ಪ್ರಕಾಶ ಕುಮಾರ್ ಚೋಪ್ರಾ, ರಮೇಶ, ಪಾವ್ಡ, ರಾಜೇಂದ್ರ ಕುಮಾರ್ ಚೋಪ್ರಾ, ಅಶೋಕ ಕುಮಾರ್ ದಾರಿವಾಲ್ ಮತ್ತಿತರರಿದ್ದರು.