utsava 
ಜಿಲ್ಲೆ

ಹಿಂದು ಧರ್ಮದ ಪ್ರತಿ ಆಚರಣೆಗಿದೆ ವೈಶಿಷ್ಟ್ಯ

ಶಿವರಾಜ.ಎಂ

ಸೂಲಿಬೆಲೆ: ಹಿಂದು ಧರ್ಮದಲ್ಲಿನ ಪ್ರತಿ ಆಚರಣೆಗೂ ವೈಶಿಷ್ಟ್ಯತೆ ಇದ್ದು, ಈ ಆಚರಣೆಗಳು ಧಾರ್ಮಿಕವಾಗಿ ನಮಗೆ ಬಂದಿರುವ ಕೊಡುಗೆಯಾಗಿವೆ ಎಂದು ಬತ್ತಿಗಾನಹಳ್ಳಿ ಗವಿರಮಾನಂದ ಶ್ರೀಗಳು ಹೇಳಿದರು.
ಸೂಲಿಬೆಲೆ ಸಮೀಪದ ಬತ್ತಿಗಾನಹಳ್ಳಿ ಬೋಡಮ್ಮನಗುಡ್ಡ ಗವಿರಮಾನಂದ ಶ್ರೀಗಳ ಆಶ್ರಮದಲ್ಲಿ ಹಮ್ಮಿಕೊಂಡಿದ್ದ ಮಕರ ಸಂಕ್ರಮಣ ಹಾಗೂ 38ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ಮಾನವ ಜನ್ಮ ಶ್ರೇಷ್ಠವಾಗಿದ್ದು, ಜೀವಿತಾವಧಿಯಲ್ಲಿ ಬಡವ ಬಲ್ಲಿದರಿಗೆ ಸಹಾಯ ಹಸ್ತ ಚಾಚಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂದರು.
ಅಗ್ನಿಕೊಂಡ ಪೂಜಾ ಕಾರ್ಯಕ್ರಮ, ಚಾಮುಂಡೇಶ್ವರಿ ಆರಾಧನೆ, ಆಭಯ ಆಂಜನೇಯಸ್ವಾಮಿ ಪೂಜೆ, ಗಾಯತ್ರಿದೇವಿ ಪೂಜೆ, ಪ್ರಸನ್ನ ವಿನಾಯಕ ಉತ್ಸವ, ಜಡೇ ಮುನೇಶ್ವರಸ್ವಾಮಿ ಉತ್ಸವ, ಸತ್ಯನಾರಾಯಣಸ್ವಾಮಿ ಉತ್ಸವ, ಅಖಂಡ ಭಜನೆ ಹಾಗೂ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.