ಜಿಲ್ಲೆ

ದೇಹ ದಾನದ ವಾಗ್ದಾನ ಮಾಡಿದ ಅಣ್ಣಿಗೇರಿ ಕುಟುಂಬ

ವಿಜಯಪುರ : ಸಾಮಾಜಿಕ ಹೋರಾಟಗಾರ ರಾವ ಅಣ್ಣಿಗೇರಿ, ಕುಟುಂಬದ ಸದಸ್ಯರಾದ ತಾಯಿ ಕಮಲಾ ಅಣ್ಣಿಗೇರಿ ಹಾಗೂ ಪತ್ನಿ ರಚನಾ ಅಣ್ಣಿಗೇರಿ ಅವರು ಸ್ವಯಂ ಪ್ರೇರಣೆಯಿಂದ ವೈದ್ಯಕಿಯ ವಿದ್ಯಾರ್ಥಿಗಳ ಅನುಕೂಲವಾಗುವ ನಿಟ್ಟಿನಲ್ಲಿ ಸ್ಥಳಿಯ ಬಿಎಲ್​ಡಿಇ ವೈದ್ಯಕಿಯ ಕಾಲೇಜಿಗೆ ದೇಹದಾನಕ್ಕೆ ವಾಗ್ದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ.ಈ ವಿಷಯವಾಗಿ ಮಾಹಿತಿ ನೀಡಿದ ರಾವ ಅಣ್ಣಿಗೇರಿ, ಮರಣದ ನಂತರ ಮನುಷ್ಯನು ದೇಹ ದಾನ ಮಾಡುವಂತ ಪ್ರವೃತ್ತಿ ಅಳವಡಿಸಿಕೊಂಡರೆ ಅದರಿಂದ ಭವಿಷ್ಯದ ವೈದ್ಯರಿಗೆ ಅತ್ಯಂತ ಸಹಕಾರಿಯಾಗಲಿದೆ.

ಹಲವರು ತಮ್ಮ ಮಕ್ಕಳನ್ನು ಉತ್ತಮ ವೈದ್ಯರನ್ನಾಗಿ ನೋಡಲು ಬಯಸುತ್ತಾರೆ. ಆದರೆ ಕಾರಣಾಂತರಗಳಿಂದ ದೇಹ ದಾನದಂತಹ ವಾಗ್ದಾನಕ್ಕೆ ಮುಂದಾಗಲ್ಲ. ಇದರಿಂದ ವೈದ್ಯಕಿಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ಮನುಷ್ಯನ ಮೃತ ದೇಹಗಳು ಸಿಗದೇ ವಿದ್ಯಾಭ್ಯಾಸಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ಹಲವು ವೈದ್ಯಕಿಯ ಕಾಲೇಜುಗಳು ಮೃತದೇಹಗಳು ಸಿಗದೇ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿವೆ. ಹೀಗಾಗಿ, ನಮ್ಮ ಕುಟುಂಬಸ್ಥರು ವೈದ್ಯಕಿಯ ವಿದ್ಯಾರ್ಥಿಗಳ ಅಭ್ಯಾಸಕ್ಕೆ ಸಹಕಾರಿಯಾಗಲಿ ಎಂಬ ಸದುದ್ದೇಶದಿಂದ ದೇಹದಾನ ಮಾಡಲಾಗುತ್ತಿದೆ ಎಂದು ತಿಳಿಸಿದರು.

ವಿಜಯಪುರದ ಬಿಎಲ್​ಡಿಇ ವೈದ್ಯಕಿಯ ಕಾಲೇಜಿಗೆ ದೇಹದಾನದ ವಾಗ್ದಾನ ಮಾಡಿದ ರಾವ ಅಣ್ಣಿಗೇರಿ, ಕಮಲಾ ಅಣ್ಣಿಗೇರಿ ಹಾಗೂ ಪತ್ನಿ ರಚನಾ ಅಣ್ಣಿಗೇರಿ ಇದ್ದಾರೆ.