ಸಂಬರಗಿ ಸಮೀಪದ ಗುಂಡೇವಾಡಿಯಲ್ಲಿ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪರ ಮತಯಾಚಿಸಲಾಯಿತು. ಪ್ರಭಾಕರ ಚವ್ಹಾಣ, ನಿಂಗಪ್ಪ ಕೋಕಲೆ, ಅಬಾ ಚವ್ಹಾಣ, ಅನಿಲ ಲೋಹಾರ, ಕರಿಯಪ್ಪ ಮಂಟೂರ ಇತರರಿದ್ದರು. 
ಜಿಲ್ಲೆ

ಅಣ್ಣಾಸಾಹೇಬ ಜೊಲ್ಲೆಗೆ ಎಲ್ಲೆಡೆ ಉತ್ತಮ ಬೆಂಬಲ

ಪ್ರಶಾಂತ ಹೂಗಾರ

ಸಂಬರಗಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪರ ಗುಂಡೇವಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾನುವಾರ ಬೈಕ್ ರ‌್ಯಾಲಿ ಮೂಲಕ ಮತಯಾಚಿಸಲಾಯಿತು.

ಕಾಗವಾಡ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಪ್ರಭಾಕರ ಚವ್ಹಾಣ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಬಿಜೆಪಿ ಪ್ರಾಬಲ್ಯ ಹೊಂದಿದೆ. ಗ್ರಾಮೀಣ ಭಾಗದಲ್ಲಿ ಕೇಂದ್ರ ಸರ್ಕಾರ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಜನರ ಮನ ಗೆದ್ದಿದೆ. ಹಾಗಾಗಿ, ಜನರೂ ನಮ್ಮೊಂದಿಗಿದ್ದಾರೆ. ಮೊದಲ ಸುತ್ತಿನ ಪ್ರಚಾರ ಮುಗಿದಿದ್ದು, ಎರಡನೇ ಸುತ್ತಿನ ಪ್ರಚಾರ ಆರಂಭವಾಗಿದೆ. ಎಲ್ಲೆಡೆ ಉತ್ತಮ ಬೆಂಬಲ ವ್ಯಕ್ತವಾಗಿದೆ ಎಂದರು.

ಬಿಜೆಪಿ ಚಿಕ್ಕೋಡಿ ಜಿಲ್ಲೆ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಕೋಕಲೆ, ಅಬಾ ಚವ್ಹಾಣ, ಅನಿಲ ಲೋಹಾರ, ಕರಿಯಪ್ಪ ಮಂಟೂರ ಇತರರಿದ್ದರು.