ಜಿಲ್ಲೆ

ಅಣ್ಣಾಮಲೈ vs ಸಸಿಕಾಂತ್ ಸೆಂಥಿಲ್

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ತಮಿಳುನಾಡು ರಾಜಕೀಯಲ್ಲಿ ಕರ್ನಾಟಕ ಕೇಡರ್​ನ ನಿವೃತ್ತ ಅಧಿಕಾರಿಗಳಿಬ್ಬರ ನಡುವೆ ಜಿದ್ದಾಜಿದ್ದಿ ನಿಶ್ಚಯವಾಗಿದೆ. ಖಡಕ್ ಐಪಿಎಸ್ ಅಧಿಕಾರಿ ಎಂದೇ ಗುರುತಿಸಿಕೊಂಡಿದ್ದ ಅಣ್ಣಾಮಲೈ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿ ಈಗಾಗಲೇ ತಳಮಟ್ಟದಲ್ಲಿ ಪಕ್ಷ ಸಂಘಟನೆ ಕೆಲಸಕ್ಕೆ ಕೈಹಾಕಿದ್ದಾರೆ.

ಇದೇ ವೇಳೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಐಎಎಸ್ ಅಧಿಕಾರಿಯಾಗಿ ಕೆಲಸ ಮಾಡಿ ಸ್ವಯಂ ನಿವೃತ್ತಿ ತೆಗೆದುಕೊಂಡ ಸಸಿಕಾಂತ್ ಸೆಂಥಿಲ್ ಕಾಂಗ್ರೆಸ್ ಸೇರುತ್ತಿರುವುದಾಗಿ ಘೋಷಿಸಿಕೊಂಡಿದ್ದಾರೆ.

ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ ಇರುವ ತಮಿಳುನಾಡಿನಲ್ಲಿ ಇಬ್ಬರಿಗೂ ಸಾಕಷ್ಟು ಸವಾಲುಗಳಿವೆ. ಅಣ್ಣಾಮಲೈ ಈಗಾಗಲೆ ಚಟುವಟಿಕೆ ಆರಂಭಿಸಿದ್ದು, ಪಕ್ಷ ಸಂಘಟನೆಗಾಗಿ ರ್ಯಾಲಿ, ಸಭೆ ನಡೆಸುತ್ತಿದ್ದಾರೆ. ಸೆಂಥಿಲ್ ಕಾಂಗ್ರೆಸ್ ಮೂಲಕ ಭವಿಷ್ಯ ಕಾಣಲು ಹೊರಟಿದ್ದಾರೆ.