ಜಿಲ್ಲೆ

ನೈಋತ್ಯ ರೈಲ್ವೆ ಡಿಜಿಎಂ ಆಗಿ ಅಣ್ಣಾದೊರೈ

ಹುಬ್ಬಳ್ಳಿ : ನೈಋತ್ಯ ರೈಲ್ವೆ ವಲಯದ ಹಿರಿಯ ಉಪ ಪ್ರಧಾನ ವ್ಯವಸ್ಥಾಪಕ ಮತ್ತು ಮುಖ್ಯ ವೀಕ್ಷಣಾ ಅಧಿಕಾರಿಯಾಗಿ ಅಣ್ಣಾದೊರೈ ಅವರು ಗುರುವಾರ ಅಧಿಕಾರ ವಹಿಸಿಕೊಂಡರು.

ಅವರು 1990 ರ ಬ್ಯಾಚ್​ನ ಭಾರತೀಯ ರೈಲ್ವೆ ಸ್ಪೋರ್ಟ್ಸ್ ಸರ್ವಿಸ್ (ಐಆರ್​ಎಸ್​ಎಸ್) ಅಧಿಕಾರಿಯಾಗಿದ್ದಾರೆ.

ನೈಋತ್ಯ ರೈಲ್ವೆಯ ಹಿರಿಯ ಉಪ ಪ್ರಧಾನ ವ್ಯವಸ್ಥಾಪಕ ಮತ್ತು ಮುಖ್ಯ ವಿಚಕ್ಷಣಾ ಅಧಿಕಾರಿಯಾಗಿ ನೇಮಕಗೊಳ್ಳುವ ಮೊದಲು ಅವರು ದಕ್ಷಿಣ ರೈಲ್ವೆಯ ಮುಖ್ಯ ಸಾಮಗ್ರಿಗಳ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು.