raichur 
ಜಿಲ್ಲೆ

ಅನ್ನಭಾಗ್ಯ ಅಕ್ಕಿ ಜಪ್ತಿ- ಮೂವರ ಬಂಧನ

Raichur - Reporter - Rachhai Swamy

 ರಾಯಚೂರು ಅನ್ನಭಾಗ್ಯ ಯೋಜನೆಯ 13.12 ಕ್ವಿಂಟಾಲ್ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪಿಗಳನ್ನು ನೇತಾಜಿ ಠಾಣೆಯ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ನಗರದ ಎನ್‌ಜಿಒ ಕಾಲೋನಿ ಹತ್ತಿರದ ಜಮಲಮ್ಮ ದೇವಸ್ಥಾನದ ಬಳಿ ಅನಧೀಕೃತವಾಗಿ ಸರ್ಕಾರದ ಅನ್ನ ಭಾಗ್ಯ ಯೋಜನೆಗಾಗಿ ಬಿಡುಗಡೆ ಮಾಡಲಾಗಿದ್ದ, 13.12 ಕ್ವಿಂಟಾಲ್ ಅಕ್ಕಿಯನ್ನು ತೆಲಂಗಾಣ ಮೂಲದ ರಾಜೇಶ, ರಮೇಶ ಶಿವರಾಜ್ ಎಂಬುವವರು ಗೂಡ್ಸ್ ವಾಹನದಲ್ಲಿ ಕಾಳ ಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ನೇತಾಜಿ ನಗರ ಪೊಲೀಸರು ದಾಳಿ ನಡೆಸಿದ್ದು, ಮೂರು ಜನ ಆರೋಪಿಗಳನ್ನು ವಶಕ್ಕೆ ಪಡೆದು. ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ.

ಅಕ್ಕಿ ಸಾಗಾಟದ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಹಾರ ನಿರೀಕ್ಷಕ ಶಿವಮೂರ್ತಿ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.