ಜಿಲ್ಲೆ

ಅಂಕೋಲಾ ಜಿ.ಸಿ. ಕಾಲೇಜಿಗೆ ಎ ಪ್ಲಸ್ ಮಾನ್ಯತೆ

ಸೋಮನಾಥ ರೆಡ್ಡಿ

ಅಂಕೋಲಾ: ಇಲ್ಲಿಯ ಗೋಖಲೆ ಸೆಂಟೆನರಿ ಕಾಲೇಜಿನಲ್ಲಿ ಇತ್ತೀಚಿಗೆ ನಡೆದ ನಾಲ್ಕನೇ ಆವೃತ್ತಿ ನ್ಯಾಕ್ ಪ್ರಕ್ರಿಯೆಯು ಜೂನ್ ಮೊದಲನೇ ವಾರದಲ್ಲಿ ಜರುಗಿತು. ಇತ್ತೀಚಿಗೆ ಪ್ರಕಟಗೊಂಡ ಫಲಿತಾಂಶದಲ್ಲಿ ಸಿ.ಜಿ. ಪಿ.ಎ 3.34 ಅಂಕಗಳಿಸಿ, ಎ ಪ್ಲಸ್ ಪಡೆದು ಉತ್ತರ ಕನ್ನಡ ಜಿಲ್ಲೆಯಲ್ಲಿ ಲೀಡ್ ಮಹಾವಿದ್ಯಾಲವಾಗಿ ಹೊರಹೊಮ್ಮಿದೆ.
ನ್ಯಾಕ್ ಪಿಯರ್ ತಂಡದ ಚೇರ್ಮನ್ನರಾಗಿ ಮುಂಬೈ ಎಲ್ಪಿನಸ್ಟನ್ ಕಾಲೇಜಿನ ಪ್ರಾಚಾರ್ಯ ಪ್ರೊ. ವಸಂತ ವಿ.ಹೆಳವಿ ರೆಡ್ಡಿ, ಸದಸ್ಯ ಸಂಯೋಜಕರಾಗಿ ಕಾಸರಗೋಡು ಕೇಂದ್ರೀಯ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಸುರೇಶ ರಂಗರಾಜನ್ ಮತ್ತು ಸದಸ್ಯರಾಗಿ ತಮಿಳುನಾಡು ನಾಗರಕೋಯಿಲ್ ಸ್ಕಾಟ್ ಕ್ರಿಶ್ಟಿಯನ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಜೆಜರ್ ಜೆಬನ್ಸನ್ ಕಾರ್ಯನಿರ್ವಹಿಸಿದರು. ಇತ್ತೀಚಿಗೆ ನ್ಯಾಕ್ ತಂಡವು ಕಾಲೇಜಿಗೆ ಭೇಟಿ ನ್ಯಾಕ್ ಮೌಲ್ಯಮಾಪನ ವರದಿ ವಿತರಿಸಿದರು ಎಂದು ಜಿ.ಸಿ. ಕಾಲೇಜಿನ ಪ್ರಾಚಾರ್ಯ ಡಾ.ಎಸ್.ವಿ.ವಸ್ತ್ರದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.