ಜಿಲ್ಲೆ

ಅಂಕೋಲಾ ಪ್ರಥಮ, ದಾಂಡೇಲಿ ದ್ವಿತೀಯ

ವೀರೇಶ ಸೌದ್ರಿ

ದಾಂಡೇಲಿ: ನಗರದ ಬಂಗೂರನಗರ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಆಯೋಜಿಸಿದ್ದ ಕರ್ನಾಟಕ ವಿಶ್ವ ವಿದ್ಯಾಲಯದ ಕಾರವಾರ ವಲಯ ಮತ್ತು ಅಂತರ ವಲಯದ ಎರಡು ದಿನಗಳ ಟೇಬಲ್ ಟೆನ್ನಿಸ್ ಪಂದ್ಯಾವಳಿಯ ಪುರುಷರ ವಿಭಾಗದಲ್ಲಿ ಅಂಕೋಲಾದ ಜೆ.ಸಿ. ಮಹಾವಿದ್ಯಾಲಯ ಮೊದಲ ಸ್ಥಾನ, ಬಂಗೂರನಗರ ಮಹಾವಿದ್ಯಾಲಯದ ತಂಡ ಎರಡನೇ ಸ್ಥಾನ ಪಡೆದು ಅಂತರ ಕಾಲೇಜು ಪಂದ್ಯಾವಳಿಗೆ ಅರ್ಹತೆ ಪಡೆದಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಸಿದ್ದಾಪುರದ ಎಂಜಿಸಿ ಮಹಾವಿದ್ಯಾಲಯ ಮೊದಲ ಸ್ಥಾನ, ದಾಂಡೇಲಿಯ ಬಂಗೂರನಗರ ಮಹಾವಿದ್ಯಾಲಯ ದ್ವಿತೀಯ ಸ್ಥಾನ ಪಡೆದುಕೊಂಡಿದೆ.

ಅಂತರ ವಲಯ ಪಂದ್ಯಾವಳಿಯಲ್ಲಿ ಪುರುಷರ ವಿಭಾಗದಲ್ಲಿ ಧಾರವಾಡದ ಜೆಎಸ್‌ಎಸ್ ಮಹಾವಿದ್ಯಾಲಯ ಮೊದಲ ಸ್ಥಾನ, ಹುಬ್ಬಳ್ಳಿ ಗ್ಲೋಬಲ್ ಕಾಲೇಜ ಆಫ್ ಮ್ಯಾನೇಜ್‌ಮೆಂಟ್ ದ್ವಿತೀಯ, ಅಂಕೋಲಾದ ಜೆ.ಸಿ ಮಹಾವಿದ್ಯಾಲಯ ತೃತಿಯ ಸ್ಥಾನವನ್ನು ಪಡೆದುಕೊಂಡಿವೆ.

ಮಹಿಳೆಯರ ವಿಭಾಗದಲ್ಲಿ ಬಂಗೂರನಗರ ಮಹಾವಿದ್ಯಾಲಯ ಪ್ರಥಮ ಸ್ಥಾನ, ಸಿದ್ದಾಪುರದ ಎಂಜೆಸಿ ಮಹಾವಿದ್ಯಾಲಯ ಹಾಗೂ ಹಾವೇರಿಯ ಜೆಎಚ್ ಮಹಾವಿದ್ಯಾಲಯ ತೃತೀಯ ಸ್ಥಾನ ಪಡೆದಿವೆ.

ಪಂದ್ಯಾವಳಿಯನ್ನು ಅರಣ್ಯ ಇಲಾಖೆಯ ಎಸಿಎಫ್ ಸಂತೋಷ ಚವ್ಹಾಣ ಉದ್ಘಟಿಸಿದರು. ಪ್ರಾಂಶುಪಾಲ ಡಾ. ಬಿ.ಎಲ್. ಗುಂಡೂರ, ಸಹಾಯಕ ಪ್ರಧ್ಯಾಪಕರಾದ ಶಿವಯೋಗಿ ಹಿರೇಮಠ, ನಯನಾ ನಾರ್ವೇಕರ, ಸಂಯೋಜಕ ವಿನಯ ಉಪಸ್ಥಿತರಿದ್ದರು.