ಚಿಕ್ಕಮಗಳೂರಿನ ಜಿಲ್ಲಾ ವಕ್ಫ್ ಕಾರ್ಯಾಲಯದಲ್ಲಿ ನಡೆದ ಜಿಲ್ಲಾ ವಕ್ಫ್ ಮಂಡಳಿ ಸದಸ್ಯತ್ವ ನೋಂದಣಿ ಪ್ರಕ್ರಿಯೆ ಕುರಿತ ಸಭೆಯಲ್ಲಿ ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಮಹಮ್ಮದ್ ಶಾಹೀದ್ ರಜ್ವಿ ಮಾತನಾಡಿದರು. ಅಬ್ದುಲ್ ಸತ್ತಾರ್, ಮುನೀರ್ ಅಹಮದ್, ನಜೀರ್ ಅಹ್ಮದ್, ಸಿಖಂಧರ್ ಖಾನ್, ದಾವೂದ್ ಅಲಿ ಉಪಸ್ಥಿತರಿದ್ದರು. 
ಜಿಲ್ಲೆ

ಅಂಜುಮನ್ ಇಸ್ಲಾಮಿಯಾ ಸದಸ್ಯತ್ವ ನೋಂದಣಿ ಪ್ರಕ್ರಿಯೆ ಆರಂಭ

ಚಿಕ್ಕಮಗಳೂರು: ಹದಿನೆಂಟು ವರ್ಷ ಮೇಲ್ಪಟ್ಟ ನಗರದ ಮುಸ್ಲಿಂ ಸಮುದಾಯದ ಯುವಕರಿಗೆ ಅಂಜುಮನ್ ಇಸ್ಲಾಮಿಯಾ ಸದಸ್ಯತ್ವ ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಮಹಮ್ಮದ್ ಶಾಹೀದ್ ರಜ್ವಿ ತಿಳಿಸಿದರು.

ನಗರದ ಜಿಲ್ಲಾ ವಕ್ಫ್ ಕಾರ್ಯಾಲಯದಲ್ಲಿ ಜಿಲ್ಲಾ ವಕ್ಫ್ ಮಂಡಳಿ ಸದಸ್ಯತ್ವ ನೋಂದಣಿ ಪ್ರಕ್ರಿಯೆ ಕುರಿತ ಸಭೆಯಲ್ಲಿ ಅಂಜುಮನ್ ಇಸ್ಲಾಮಿಯಾ ಸಂಸ್ಥೆಯ ಸದಸ್ಯತ್ವ ನೋಂದಣಿ ಪ್ರಕ್ರಿಯೆ ಆರಂಭ ಮಾಡಲು ಗುರುವಾರ ನಿರ್ಣಯ ಕೈಗೊಂಡು ಮಾತನಾಡಿದರು.
ಸದಸ್ಯತ್ವ ನೋಂದಣಿ ಪ್ರಕ್ರಿಯೆಯು ಸೆ. ೨ರಿಂದ ಸೆ. ೧೩ರವರೆಗೆ ನಡೆಯಲಿದೆ. ೧೮ ವರ್ವ ಮೇಲ್ಪಟ್ಟ ನಗರದ ಮುಸ್ಲಿಂ ಸಮುದಾಯದ ಪುರುಷರಿಗೆ ಅಧ್ಯತೆ ಕಲ್ಪಿಸಲಾಗಿದೆ. ಇಚ್ಛೆಯುಳ್ಳ ಅಭ್ಯರ್ಥಿಗಳು ನಿಗದಿತ ದಿನಾಂಕಗಳAದು ಬೆಳಗ್ಗೆ ೧೦.೩೦ ರಿಂದ ಮಧ್ಯಾಹ್ನ ೧ ಗಂಟೆ ಅಥವಾ ಮಧ್ಯಾಹ್ನ ೨.೩೦ ರಿಂದ ೪.೩೦ರವರೆಗೆ ಅಂಜುಮನ್ ಇಸ್ಲಾಮಿಯಾ ಸಂಸ್ಥೆಗೆ ಸಂಬAಧಪಟ್ಟ ದಾಖಲಾಗಳೊಂದಿಗೆ ಖುದ್ದು ಹಾಜರಾಗಿ ನೋಂದಣಿ ಮಾಡಿಸಬಹುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವಕ್ಫ್ ಅಧಿಕಾರಿ ಅಬ್ದುಲ್ ಸತ್ತಾರ್, ನಗರಸಭೆ ಸದಸ್ಯರಾದ ಮುನೀರ್ ಅಹ್ಮದ್, ಜಾವೀದ್, ಅಂಜುಮಾನ್ ಇಸ್ಲಾಮಿಯಾ ಮಸೀದಿ ಮಾಜಿ ಅಧ್ಯಕ್ಷ ನಜೀರ್ ಅಹ್ಮದ್, ಮಸೀದಿ ಅಧ್ಯಕ್ಷ ಸಿಖಂಧರ್ ಖಾನ್, ದಂಟರಮಕ್ಕಿ ಮಸೀದಿ ಅಧ್ಯಕ್ಷ ದಾವೂದ್‌ಆಲಿ ಮತ್ತಿತರರಿದ್ದರು.