ಜಿಲ್ಲೆ

ಅಂಜುಮನ್ ಇಸ್ಲಾಂ ಕಮೀಟಿ ನವೀಕರಣಕ್ಕಾಗಿ ಲಂಚಕ್ಕೆ ಬೇಡಿಕೆ, ವಕ್ಫ್ ಅಧಿಕಾರಿ ಲೋಕಾಯುಕ್ತ ಬಲೆಗೆ

ವಿಜಯಪುರ: ಅಂಜುಮನ್ ಇಸ್ಲಾಂ ಕಮೀಟಿಯ ನವೀಕರಣಕ್ಕಾಗಿ ಲಂಚಕ್ಕೆ ಬೇಡಿಕೆ ಇರಿಸಿ, ಒಂದೂವರೆ ಲಕ್ಷ ರೂಪಾಯಿ ಪಡೆಯುವಾಗಲೇ ವಕ್ಫ್ ಬೋರ್ಡ್ ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.

ಅಧಿಕಾರಿ ಮಹಮ್ಮದ್ ಮೊಸಿನ್ ಜಮಖಂಡಿ ಲಂಚಕ್ಕೆ ಬೇಡಿಕೆ ಇರಿಸಿದ ಅಧಿಕಾರಿ. ವಿಜಯಪುರದಲ್ಲಿ ಅಂಜುಮನ್ ಇಸ್ಲಾಂ ಕಮೀಟಿಯ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಲಾಗಿತ್ತು. ಈ ವೇಳೆ ಅಧಿಕಾರಿ ಮಹಮ್ಮದ್ ಮೊಸಿನ್ ಜಮಖಂಡಿ ಲಂಚಕ್ಕೆ ಬೇಡಿಕೆ ಇರಿಸಿದ್ದರಿಂದ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿತ್ತು.

ಸೋಮವಾರ ಜಿಲ್ಲಾಸ್ಪತ್ರೆ ಬಳಿ ಅಧಿಕಾರಿ ಮಹಮ್ಮದ್ ಮೊಸಿನ್ ಜಮಖಂಡಿ ಹಾಗೂ ಅವನ ಸಹೋದರ ಮುಜಾಹಿದ್ ಜಮಖಂಡಿ ಹಣ ಪಡೆದುಕೊಳ್ಳುವಾಗ ಲೋಕಾಯುಕ್ತರ ಬಂಧಿಸಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿರುತ್ತದೆ ಎಂದು ಲೋಕಾಯುಕ್ತರು ತಿಳಿಸಿದ್ದಾರೆ.

ಲೋಕಾಯುಕ್ತ ಎಸ್‌ಪಿ ಟಿ. ಮಲ್ಲೇಶ, ಪೊಲೀಸ್ ಇನ್ಸಪೆಕ್ಟರ್‌ಗಳಾದ ಆನಂದ್ ಟಕ್ಕಣ್ಣವರ್ ಮತ್ತು ಆನಂದ್ ದೋಣಿ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.