ಜಿಲ್ಲೆ

ಅಂಜುಮನ್ ಚುನಾವಣೆಯಲ್ಲಿ ಯಾರಿಗೂ ಬೆಂಬಲ ಸೂಚಿಸಿಲ್ಲ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಫೆ.18 ರಂದು ನಡೆಯಲಿರುವ ಹುಬ್ಬಳ್ಳಿ ಅಂಜುಮನ್ ಸಂಸ್ಥೆ ಚುನಾವಣೆಯಲ್ಲಿ ಯಾವುದೇ ತಂಡ ಅಥವಾ ಅಭ್ಯರ್ಥಿಗೆ ಬೆಂಬಲ ಸೂಚಿಸಿರುವುದಿಲ್ಲ. ಯಾರದರೂ ಚುನಾವಣೆ ಪ್ರಚಾರದಲ್ಲಿ ನನ್ನ ಹೆಸರಾಗಲಿ, ಭಾವಚಿತ್ರವಾಗಲಿ ಬಳಸಿಕೊಂಡರೆ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಅಂಜುಮನ್ ಸಂಸ್ಥೆ ಚುನಾವಣೆಯಲ್ಲಿ ಭಾಗವಹಿಸಿದ ತಂಡಗಳು ಮತ್ತು ಸ್ವತಂತ್ರವಾಗಿ ಸ್ಪರ್ಧಿಸಿರುವ ಎಲ್ಲ ಅಭ್ಯರ್ಥಿಗಳು ನನಗೆ ತುಂಬ ಆಪ್ತರು. ಆದರೆ, ಸದ್ಯ ನಡೆದಿರುವ ಈ ಚುನಾವಣೆಯಲ್ಲಿ ಸ್ಪರ್ಧಿಸಿರುವ ತಂಡಗಳಿಗಾಗಲಿ ಅಥವಾ ಅಭ್ಯರ್ಥಿಗಾಗಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಯಾರಿಗೂ ಬೆಂಬಲ ಸೂಚಿಸಿರುವುದಿಲ್ಲ ಎಂದು ತಿಳಿಸಿದ್ದಾರೆ. ಇಷ್ಟಾಗಿಯೂ ಕೆಲ ಕಿಡಿಗೇಡಿಗಳು ನನ್ನ ಮತ್ತು ನನ್ನ ಸಹೋದರರ ಫೋಟೋ ಬಳಸಿಕೊಂಡು ಶಾಸಕರ ಬೆಂಬಲ ನಮ್ಮ ತಂಡಕ್ಕೆ ಇದೆ ಎಂಬ ಸಂದೇಶವನ್ನು ವಾಟ್ಸಾಪ್, ಫೇಸ್​ಬುಕ್​ಗಳಲ್ಲಿ ಹರಿಬಿಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಸದ್ಯ ರಾಜ್ಯ ವಿಧಾನಸಭೆ ಬಜೆಟ್ ಅಧಿವೇಶನ ನಡೆದಿರುವ ಹಿನ್ನೆಲೆ ಬೆಂಗಳೂರು ಪ್ರವಾಸದಲ್ಲಿರುವ ಕಾರಣ ಅಂಥ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ನನ್ನ ಆಪ್ತರಲ್ಲಿ ಒಬ್ಬರಾದ ಶ್ರೀನಿವಾಸ ಬೆಳದಡಿ ಅವರ ಮೂಲಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ದಯವಿಟ್ಟು ಅನ್ಯತಾ ಭಾವಿಸದೇ ಅಂಜುಮನ್ ಸಂಸ್ಥೆ ಚುನಾವಣೆಯಲ್ಲಿ ನನ್ನ ಹೆಸರಾಗಲಿ, ಭಾವಚಿತ್ರ ಬಳಸಕೂಡದು ಎಂದು ಶಾಸಕ ಅಬ್ಬಯ್ಯ ತಿಳಿಸಿದ್ದಾರೆ.