ಮುಳಬಾಗಿಲು: ಭಗವಾನ್ ಶ್ರೀಕೃಷ್ಣನ ಆೆ ಮೇರೆಗೆ ಮಹಾಭಾರತದ ಯುದ್ಧದ ವಿಜಯದ ಸಂಕೇತವಾಗಿ ಅರ್ಜುನನಿಂದ ಪ್ರತಿಷ್ಠಾಪನೆಗೊಂಡಿರುವ ಮುಳಬಾಗಿಲಿನ ಪುರಾಣ ಪ್ರಸಿದ್ಧ ಶ್ರೀ ಆಂಜನೇಯಸ್ವಾಮಿ ದೇಗುಲದಲ್ಲಿ ಮೇ 10 ಬ್ರಹ್ಮ ರಥೋತ್ಸವ ಆಯೋಜಿಸಲಾಗಿದ್ದು, ಅದರ ಅಂಗವಾಗಿ ಮೇ 14ರವರೆಗೆ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಈಗಾಗಲೇ ಮೇ 3 ರಿಂದ ಮೂಲ ದೇವರಾದ ರಾಮದೇವರಿಗೆ ಅಭಿಷೇಕ, ಅಲಂಕಾರ, ಅಂಕರಾಪಣೆ, ಧ್ವಜಾರೋಣ, ಮಂಟಪೋತ್ಸವ, ಉತ್ಸವ ದೇವರಿಗೆ ತಿರುಮಂಜನ ನಿವೇದನೆ, ಶೇಷವಾಹನೋತ್ಸವ, ಪುಷ್ಪಪಲ್ಲಕ್ಕಿ ಉತ್ಸವ, ಹನುಮಂತ ವಾಹನೋತ್ಸವ, ಗುರುವಾರ ಗಜ ವಾಹನೋತ್ಸವ ಪೂಜಾ ಕಾರ್ಯಗಳು ನೆರವೇರಿದವು.
ಮೇ 9ರಂದು ಉತ್ಸವ ದೇವರಿಗೆ ತಿರುಮಂಜನ ನಿವೇದನೆ, ಆಂಜನೇಯಸ್ವಾಮಿಗೆ ಅಭಿಷೇಕ, ಸೀತಾರಾಮ ದೇವರಿಗೆ ಕಲ್ಯಾಣೋತ್ಸವ, ಗರುಡೋತ್ಸವ, ಕಲ್ಯಾಣ ಮಂಟಪ ಅಲಂಕಾರ ನಡೆಯಲಿದೆ. ಮೇ 10 ರಂದು ಮೂಲ ದೇವರಿಗೆ ಪುಪ್ಪಲಂಕಾರ, ಶ್ರೀ ಕೃಷ್ಣ ಗಂಧೋತ್ಸವ, ಪಂಚ ಕಜ್ಜಾಯ ನಿವೇದನೆ, ಚಾಮರಸೇವೆ, ಉತ್ಸವ ದೇವರಿಗೆ ವಿಶೇಷ ಹೂವಿನ ಅಲಂಕಾರ, ಪಾನಕ ಪೂಜೆ ನಡೆಯಲಿದ್ದು, ಬ್ರಹ್ಮರಥೋತ್ಸವ ನೆರವೇರಲಿದೆ. ಮೇ 11 ರಂದು ಅಶ್ವ ವಾಹನೋತ್ಸವ, ಮೇ 12ರಂದು ಹಂಸ ವಾಹನೋತ್ಸವ, ಮೇ 13 ರಂದು ಚಂದ್ರಪ್ರಭಾ ವಾಹನೋತ್ಸವ, ಮೇ 14 ರಂದು ಮೂಲ ಆಂಜನೇಯ ದೇವರಿಗೆ ಮಹಾಭಿಷೇಕ, ಶಯನೋತ್ಸವ, ಪುಷ್ಪಯಾಗೋತ್ಸವ, ಡೋಲೋತ್ಸವ, ಪಂಚಪಕ್ಷಗಳ ಸೇವಾ ಕಾರ್ಯಕ್ರಮಗಳೊಂದಿಗೆ ಪೂಜೆ ಸಂಪನ್ನಗೊಳ್ಳಲಿದೆ.