ಕಡೂರು ತಾಲೂಕಿನ ಕುಂಕನಾಡು ಗ್ರಾಮದ ಆಂಜನೇಯ ಸ್ವಾಮಿ ರಥೋತ್ಸವ ಜರುಗಿತು. 
ಜಿಲ್ಲೆ

ಆಂಜನೇಯ ಸ್ವಾಮಿ ಅದ್ದೂರಿ ರಥೋತ್ಸವ

ಕಡೂರು: ಕುಂಕನಾಡು ಗ್ರಾಮದ ಆಂಜನೇಯ ಸ್ವಾಮಿ ರಥೋತ್ಸವ ಶನಿವಾರ ವಿಜೃಂಭಣೆಯಿಂದ ಜರುಗಿತು.

ಬೆಳಗ್ಗೆ ಆಂಜನೇಯಸ್ವಾಮಿ ಮೂಲಸ್ಥಾನದಲ್ಲಿ ವಿಶೇಷ ಅಭಿಷೇಕ, ಪೂಜೆ ನೆರವೇರಿಸಿದ ನಂತರ ಮೂಲ ದೇವರಿಗೆ ಬೆಳ್ಳಿ ಕವಚ ಧಾರಣೆ ಮಾಡಿ ಅಲಂಕಾರ ನೆರವೇರಿಸಲಾಯಿತು. ಆಂಜನೇಯ ಸ್ವಾಮಿ ಉತ್ಸವಮೂರ್ತಿಯನ್ನು ಸಕಲ ವಾದ್ಯಗಳ ಸಮೇತ ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಬಲಿಪೂಜೆ ನಂತರ ಭಕ್ತರು ರಥ ಎಳೆದು ಸಂಭ್ರಮಿಸಿದರು. ಸುತ್ತಮುತ್ತಲ ಗ್ರಾಮಸ್ಥರು ಅಲಂಕೃತ ಪಾನಕದ ಬಂಡಿಯನ್ನು ರಥದ ಸುತ್ತ ಓಡಿಸಿ ಹರಕೆ ತೀರಿಸಿದರು. ರಥೋತ್ಸವಕ್ಕೆ ಆಗಮಿಸಿದ ಭಕ್ತರಿಗೆ ಪಾನಕ, ಕೋಸುಂಬರಿ, ಮಜ್ಜಿಗೆ ವಿತರಿಸಲಾಯಿತು. ಏ.28ರಂದು ಸೂರ್ಯಮಂಡಲದೊಂದಿಗೆ ಸ್ವಾಮಿಯ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ. ಏ.30ರಂದು ಗ್ರಾಮ ದೇವತೆ ಅಂತರಘಟ್ಟಮ್ಮ ದೇವಿ ಬಾನ ಸೇವೆ ಹಾಗೂ ಮಹಿಷ ಉತ್ಸವ ನಡೆಯಲಿದೆ.