ಪರಶುರಾಮಪುರ: ಸಮೀಪದ ನಾಗಗೊಂಡನಹಳ್ಳಿ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಶ್ರಾವಣದ ಅಂಗವಾಗಿ ವಿಶೇಷ ಪೂಜಾ ಉತ್ಸವ ನಡೆಯಿತು.
ದೇವರ ಮೂರ್ತಿಯನ್ನು ಸನಿಹದ ವೇದಾವತಿ ನದಿಯ ಚಿಲುಮೆಯಲ್ಲಿ ಗಂಗಾಪೂಜೆ ನೆರವೇರಿಸಿ, ವಿವಿಧ ಮಂಗಳ ವಾದ್ಯಗಳ ಮೂಲಕ ದೇಗುಲಕ್ಕೆ ಮೆರವಣಗೆ ಮೂಲಕ ಆಗಮಿಸಿ ಪೂಜಾ ಕಾರ್ಯಗಳನ್ನು ನಡೆಸಲಾಯಿತು.
ದೇವಸ್ಥಾನ ಸಮಿತಿ ಸದಸ್ಯರು, ಗುಡಿಕಟ್ಟೆಯ ಪೂಜಾರರು, ಹನ್ನೆರೆಡು ಕೈವಾಡಸ್ತರು ಹಾಗೂ ಗ್ರಾಮಸ್ಥರು ಇದ್ದರು.