ಸಿರವಾರ: ಪಟ್ಟಣ ವ್ಯಾಪ್ತಿಯ ಮುಚ್ಚಳಗುಡ್ಡ ಕ್ಯಾಂಪ್‌ನಲ್ಲಿ ಆಂಜನೇಯ ಸ್ವಾಮಿಯ 9ನೇ ವರ್ಷದ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು. ಶ್ರಾವಣ ಮಾಸದ ಕಡೆಯ ಶನಿವಾರ ಬೆಳಗ್ಗೆ ರುದ್ರಾಭಿಷೇಕ ನಡೆಯಿತು. ಭಕ್ತರು ಹರಕೆ ತೀರಿಸಿದರು. ಸಂಜೆ ನವಲಕಲ್ ಬೃಹನ್ಮಠದ ಗಂಗಾಧರಪ್ಪ ತಾತ, ಅಯ್ಯಪ್ಪ ಪೂಜಾರಿ ನೇತೃತ್ವದಲ್ಲಿ ಉಚ್ಚಾಯ ಮಹೋತ್ಸವ ಜರುಗಿತು. ಶಾಸಕ ಜಿ.ಹಂಪಯ್ಯ ನಾಯಕ, ಪಟ್ಟಣ ಪಂಚಾಯಿತಿ ಸದಸ್ಯರು, ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.