ಮುಗಳಖೋಡ: ಪಟ್ಟಣದಲ್ಲಿ ಹನುಮಾನ ಓಕುಳಿ ಅಂಗವಾಗಿ ಸೋಮವಾರ ಬೆಳಗ್ಗೆ ಆಂಜನೇಯ ಸ್ವಾಮಿಗೆ ಅಭಿಷೇಕ, ಎಲೆಪೂಜೆ ನೆರವೇರಿತು.
ವಿಠ್ಠಲ ಮಂದಿರದಿಂದ ಹನುಮಾನ ಮಂದಿರದವರೆಗೆ ಸಕಲ ಭಕ್ತರಿಂದ ಹಾಗೂ ವಾದ್ಯ ವೃಂದದೊಂದಿಗೆ ಆಂಜನೇಯ ಸ್ವಾಮಿ ಭಾವಚಿತ್ರ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹನುಮಾನ ದೇವಾಲಯಕ್ಕೆ ತಲುಪಿತು.
ನಂತರ ಕೊಂಡಕ್ಕೆ ಜಲ ಸಮರ್ಪಣೆ ಹಾಗೂ ಪಲ್ಲಕ್ಕಿ ಉತ್ಸವದೊಂದಿಗೆ ಓಕುಳಿ ಮಂಗಲಗೊಂಡಿತು.
ಮೇ 27ರಂದು ಸಂಜೆ 4 ಗಂಟೆಗೆ ಜಂಗೀ ನಿಕಾಲಿ ಕುಸ್ತಿ ಆಯೋಜಿಸಲಾಗಿದೆ. ರಾಜು ನಾಯಿಕ, ಉದಯ ನಾಯಿಕ, ರಮೇಶ ಖೇತಗೌಡರ, ಅಪ್ಪಾಸಾಹೇಬ ನಾಯಿಕ, ಗೋಪಾಲ ಮೆಕ್ಕಳಕಿ, ಚಂದ್ರಶೇಖರ ನಾಯಿಕ, ಆನಂದ ಯರಡೆತ್ತಿ, ತಮ್ಮಾಸಾಹೇಬ ನಾಯಿಕ, ಮಾಳು ಅಳಗವಾಡಿ, ವಿಜಯಕುಮಾರ ನಾಯಿಕ, ಅಪ್ಪಾಸಾಹೇಬ ಖೇತಗೌಡರ, ಸಿದ್ದಪ್ಪ ಹಳಂಗಳಿ, ಯಲ್ಲಪ್ಪ ಪೂಜೇರಿ ಇತರರಿದ್ದರು.