ಗಂಗಾವತಿ: ತಾಲೂಕಿನ ಹನುಮನಹಳ್ಳಿಯ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟಕ್ಕೆ ಮುಖ್ಯಚುನಾವಣೆ ಆಯುಕ್ತ ಡಾ.ಸುಖಬೀರ್‌ಸಿಂಗ್ ಸಂಧು ಭಾನುವಾರ ಭೇಟಿ ನೀಡಿ ದರುಶನ ಪಡೆದುಕೊಂಡರು.
ಕುಟುಂಬ ಸಮೇತ ಬೆಟ್ಟದ ಹತ್ತಿದ ಆಯುಕ್ತರ ಕುಟುಂಬದೊಂದಿಗೆ ಡಿಸಿ ನಲೀನ್ ಅತುಲ್ ಮತ್ತು ಎಸಿ ಕ್ಯಾ.ಮಹೇಶ ಮಾಲಗಿತ್ತಿ ಸಾಥ್ ನೀಡಿದರು. ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ, ಡಾ.ಸುಖಬೀರಸಿಂಗ್ ಸಂಧು ದಂಪತಿಯನ್ನು ಮುಜರಾಯಿ ಇಲಾಖೆಯಿಂದ ಸನ್ಮಾನಿಸಲಾಯಿತು. ದೇವಾಲಯದ ಐತಿಹ್ಯ ಮತ್ತು ನೈಸರ್ಗಿಕ ಸಂಪತ್ತು ನೋಡಿ ಬೆರಗಾದರು. ಬೆಟ್ಟದ ಸುತ್ತಮುತ್ತಲಿನ ಸ್ಮಾರಕ ಮತ್ತು ಪರಿಸರದ ಬಗ್ಗೆ ಮಾಹಿತಿ ಪಡೆದುಕೊಂಡರು.
ನಂತರ ಬೆಟ್ಟದ ಕೆಳಗಿನ ಮುಜರಾಯಿ ಇಲಾಖೆ ಕಚೇರಿ ಬಳಿ ಕಿನ್ನಾಳ ಕಲೆಯ ನೆನಪಿನ ಕಾಣಿಕೆ ನೀಡಿ ಸತ್ಕರಿಸಲಾಯಿತು. ದೇವಾಲಯದ ಸಿಇಇ ಎಚ್.ಎಂ.ಪ್ರಕಾಶರಾವ್ ಇತರರಿದ್ದರು.