ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಅನಿಶ್ ಮಹೇಶ ಹೆಬ್ಬಳ್ಳಿ ಎಂಬ ಬಾಲಪ್ರತಿಭೆ 1 ನಿಮಿಷ 15 ಸೆಕೆಂಡ್‌ಗಳಲ್ಲಿ 50 ಡೈನೋಸಾರ್‌ಗಳ ಹೆಸರು ಗುರುತಿಸಿರುವುದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲಾಗಿದೆ. ಇಲ್ಲಿನ ಹೆಬ್ಬಳ್ಳಿ ರಸ್ತೆಯ ಎಂ.ಆರ್. ನಗರದ ಮಹೇಶ ಹಾಗೂ ರಶ್ಮಿ ದಂಪತಿಯ ಪುತ್ರ ಅನೀಶ್ 2 ವರ್ಷ ಮತ್ತು 10 ತಿಂಗಳ ಪ್ರಾಯದವರು. ಲ್ಯಾಪ್‌ಟಾಪ್ ಪರದೆಯ ಮೇಲೆ ಮೂಡಿಬಂದ ಚಿತ್ರಗಳನ್ನು ನೋಡಿ 1 ನಿಮಿಷ 15 ಸೆಕೆಂಡ್‌ಗಳಲ್ಲಿ 50 ಡೈನೋಸಾರ್‌ಗಳ ಹೆಸರನ್ನು ಗುರುತಿಸಿದ್ದಾನೆ. ಈ ಸಾಧನೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವ ದೊರಕಿದ್ದು, ಡಿ. 7ರಂದು ಪ್ರಶಸ್ತಿ ನೀಡಲಾಗಿದೆ. ಡೈನೋಸಾರ್‌ಗಳ 90 ಪ್ರಭೇದಗಳನ್ನು ಗುರುತಿಸಬಲ್ಲ ಸಾಮರ್ಥ್ಯ ಅನೀಶ್‌ಗಿದ್ದು, ಅಕ್ಕ ಸಮೃದ್ಧಿಯೇ ಈತನಿಗೆ ಮಾರ್ಗದರ್ಶಕಿಯಾಗಿರುವುದು ವಿಶೇಷ.