ಜಿಲ್ಲೆ

ಜಾನುವಾರು ಲಸಿಕಾ ಅಭಿಯಾನಕ್ಕೆ ಚಾಲನೆ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಅಮರಗೋಳ ಗ್ರಾಮದಲ್ಲಿ ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಕರಬಸಪ್ಪ ಅ. ಬೆಟಗೇರಿ ಇವರ ಮನೆಯಲ್ಲಿ ಜಾನುವಾರುಗಳಿಗೆ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಕಾಲು ಹಾಗೂ ಬಾಯಿ ಬೇನೆಗೆ ಪರಿಣಾಮಕಾರಿ ಚುಚ್ಚುಮದ್ದು ನೀಡುವ ಸರ್ಕಾರದ ಲಸಿಕಾ ಅಭಿಯಾನವಾಗಿದೆ. ಇದು ಏಳನೇ ಸುತ್ತಿನ ಕಾರ್ಯಕ್ರಮವಾಗಿದೆ.

ಗೋಪೂಜೆ ಮಾಡುವ ಮೂಲಕ ಜಾನುವಾರುಗಳಿಗೆ ಕಾಲು ಬಾಯಿ ಬೇನೆ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಪಶು ವೈದ್ಯಾಧಿಕಾರಿ ಡಾ. ಪಿ.ಬಿ. ಬಣಕಾರ ಹಾಗೂ ಸಿಬ್ಬಂದಿ ಹಾಜರಿದ್ದರು.